ಬೆಂಗಳೂರು : ಮಾಜಿ ಸಚಿವ ವೆಂಕಟರಮಣಪ್ಪ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿದ್ದರಾಮಯ್ಯ ‘ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವರಾದ ಪಾವಗಡದ ವೆಂಕಟರಮಣಪ್ಪ ಅವರ ನಿಧನದಿಂದ ದುಃಖಿತನಾಗಿದ್ದೇನೆ. ವೆಂಕಟರಮಣಪ್ಪನವರು ಸರಳತೆ, ಸಜ್ಜನಿಕೆ, ಜನಾನುರಾಗಿ ವ್ಯಕ್ತಿತ್ವದ ನಾಯಕರು. ಅವರ ಅಗಲಿಕೆಯಿಂದ ರಾಜಕೀಯ ರಂಗ ಮಾತ್ರವಲ್ಲ, ಇಡೀ ಸಮಾಜ ಬಡವಾಗಿದೆ. ಸಮಾಜದ ಶ್ರಮಿಕರು,
ದುಡಿಯುವ ವರ್ಗದ ಜನರ ಬಗ್ಗೆ ವೆಂಕಟರಮಣಪ್ಪ ಅವರಿಗಿದ್ದ ವಿಶೇಷ ಕಾಳಜಿ – ಪ್ರೀತಿಯನ್ನು ಗುರುತಿಸಿ, 2013-18ರ ವರೆಗಿನ ನನ್ನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ಪ್ರಾಮಾಣಿಕ ಸೇವೆಯ ಮೂಲಕ ತಮಗೆ ದೊರೆತ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಕಾರ್ಮಿಕ ವರ್ಗದ ಹಿತ ಕಾಯುವಲ್ಲಿ ಯಶಸ್ವಿಯಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ವೆಂಕಟರಮಣಪ್ಪನವರ ಪುತ್ರ, ಶಾಸಕರಾದ ಎಚ್.ವಿ.ವೆಂಕಟೇಶ್ ಅವರ ಕುಟುಂಬಶೋಕದಲ್ಲಿ ನಾನು ಕೂಡ ಭಾಗಿ ಎಂದು ಟ್ವೀಟ್ ಮಾಡಿದ್ದಾರೆ.
ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರ
ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದಲ್ಲಿ ಕೊನೆಯುಸಿರು ಇರುವವರೆಗೆ ಸಾಮಾಜಿಕ ನ್ಯಾಯಕ್ಕಾಗಿ, ಸಂವಿಧಾನದ ಉಳಿವಿಗಾಗಿ ಮತ್ತು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

