HomeKarnataka10 ವರ್ಷದವರೆಗೆ ಶಾಲೆಗೇ ಹೋಗದ ಕೃಷಿಕನ ಮಗ 2 ಬಾರಿ ಸಿಎಂ ಆಗಿ ಇತಿಹಾಸ ಬರೆದಿದ್ದು...

10 ವರ್ಷದವರೆಗೆ ಶಾಲೆಗೇ ಹೋಗದ ಕೃಷಿಕನ ಮಗ 2 ಬಾರಿ ಸಿಎಂ ಆಗಿ ಇತಿಹಾಸ ಬರೆದಿದ್ದು ಹೇಗೆ? ಹಳೇ ಹುಲಿ ಸಿದ್ದರಾಮಯ್ಯ ಅವರ ರೋಚಕ ರಾಜಕೀಯ ಹಾದಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ರಾಜಕಾರಣದ ಅಪರೂಪದ ಮುತ್ಸದ್ದಿ ನಾಯಕ, ಅಹಿಂದ ಧ್ವನಿ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸುವುದರೊಂದಿಗೆ ರಾಜ್ಯ ರಾಜಕಾರಣದ ಒಂದು ಸುದೀರ್ಘ ಅಧ್ಯಾಯಕ್ಕೆ ಸದ್ಯ ತೆರೆ ಬಿದ್ದಿದೆ. ವಕೀಲ ವೃತ್ತಿಯಿಂದ ಹಿಡಿದು ರಾಜ್ಯದ ಅತ್ಯುನ್ನತ ಗದ್ದುಗೆಯವರೆಗೆ ಸಿದ್ದರಾಮಯ್ಯ ಅವರು ನಡೆದು ಬಂದ ಹಾದಿ ನಿಜಕ್ಕೂ ರೋಚಕ.ಅವರ ಆರಂಭಿಕ ಜೀವನ, ರಾಜಕೀಯ ಏಳುಬೀಳುಗಳು ಮತ್ತು ಅವರು ಬರೆದ ಐತಿಹಾಸಿಕ ದಾಖಲೆಗಳ ಕಂಪ್ಲೀಟ್ ಮಾಹಿತಿ ಇಲ್ಲಿದೆ:

ಆರಂಭಿಕ ಜೀವನ: ನೇರವಾಗಿ 5ನೇ ತರಗತಿಗೆ ಶಾಲೆಗೆ ಪ್ರವೇಶ

ಜನನ ಮತ್ತು ಕುಟುಂಬ: 1947ರಲ್ಲಿ ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯ ಕೃಷಿ ಕುಟುಂಬದಲ್ಲಿ ಸಿದ್ದರಾಮೇ ಗೌಡ ಮತ್ತು ಬೋರಮ್ಮ ದಂಪತಿಯ 4ನೇ ಮಗನಾಗಿ ಜನಿಸಿದರು.

ಕಲಿಕೆ ಮತ್ತು ನೃತ್ಯ: ಬಾಲ್ಯದಲ್ಲೇ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಅದ್ಭುತವಾಗಿ ಕಲಿತಿದ್ದ ಸಿದ್ದರಾಮಯ್ಯ ಅವರು 10ನೇ ವಯಸ್ಸಿನವರೆಗೆ ಶಾಲೆಗೇ ಹೋಗಿರಲಿಲ್ಲ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯಾಭ್ಯಾಸ: ಆ ಬಳಿಕ ನೇರವಾಗಿ 5ನೇ ತರಗತಿಗೆ ಸೇರಿ ವಿದ್ಯಾಭ್ಯಾಸ ಆರಂಭಿಸಿದ ಇವರು, ಮುಂದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್‌ಸಿ ಮತ್ತು ಎಲ್‌ಎಲ್‌ಬಿ ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದರು.

ರಾಜಕೀಯ ಎಂಟ್ರಿ ಮತ್ತು ಬೆಂಬಿಡದ ಸೋಲುಗಳು:

ರೈತ ಚಳವಳಿಯ ಪ್ರೇರಣೆ: ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಪ್ರೇರಣೆಯಿಂದ ರಾಜಕೀಯಕ್ಕೆ ಬಂದ ಇವರು, 1978ರಲ್ಲಿ ತಾಲೂಕು ಬೋರ್ಡ್ ಮೆಂಬರ್ ಆಗಿ ಮೊದಲ ಗೆಲುವು ಕಂಡರು.

ಮೊದಲ ಬಾರಿ ಶಾಸಕ: 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಬೆಂಬಿಡದ ಸೋಲಿನ ಸರಣಿ: ಸಿದ್ದರಾಮಯ್ಯ ಅವರಿಗೆ ರಾಜಕೀಯದಲ್ಲಿ ಸುಲಭವಾಗಿ ಏನೂ ಸಿಗಲಿಲ್ಲ. 1980ರ ಲೋಕಸಭೆ ಚುನಾವಣೆ, 1989ರ ವಿಧಾನಸಭಾ ಚುನಾವಣೆ ಮತ್ತು 1991ರ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಭಾರಿ ಸೋಲು ಎದುರಾಗಿತ್ತು.

ಎರಡು ಬಾರಿ ಡಿಸಿಎಂ ಪಟ್ಟ: ಸೋಲುಗಳಿಂದ ಧೃತಿಗೆಡದೆ ಮುನ್ನುಗ್ಗಿದ ಇವರು 1996ರಲ್ಲಿ ಜೆ.ಹೆಚ್. ಪಟೇಲ್ ಸರ್ಕಾರದಲ್ಲಿ ಮತ್ತು 2004ರಲ್ಲಿ ಧರಂ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಒಟ್ಟು ಎರಡು ಬಾರಿ ಉಪಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಅಧಿಕಾರ ನಡೆಸಿದರು.

ಕಾಂಗ್ರೆಸ್ ಸೇರ್ಪಡೆ ಹಾಗೂ ಮುಖ್ಯಮಂತ್ರಿ ಗದ್ದುಗೆ:

ಜೆಡಿಎಸ್‌ನಿಂದ ಹೊರಕ್ಕೆ: ದೇವೇಗೌಡರ ಜೊತೆಗಿನ ಭಿನ್ನಾಭಿಪ್ರಾಯದ ಕಾರಣ 2005ರಲ್ಲಿ ಜೆಡಿಎಸ್‌ನಿಂದ ಹೊರಬಂದರು.

ಹೊಸ ಅಧ್ಯಾಯ: 2006ರಲ್ಲಿ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಇವರು, 2008ರಲ್ಲಿ ವರುಣಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.

2 ಬಾರಿ ಸಿಎಂ: 2013ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಿದರು. ತದನಂತರ 2023ರಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಾಗ 2ನೇ ಬಾರಿಗೆ ಸಿಎಂ ಗದ್ದುಗೆ ಏರಿದರು.

ಸಿದ್ದರಾಮಯ್ಯ ಹೆಸರಲ್ಲೇ ಇರುವ 2 ಐತಿಹಾಸಿಕ ದಾಖಲೆಗಳು

ದೀರ್ಘಾವಧಿಯ ಸಿಎಂ: ಒಟ್ಟು 7 ವರ್ಷ 240 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಮೂಲಕ, ಅತಿ ಹೆಚ್ಚು ಅವಧಿ ರಾಜ್ಯದ ಚುಕ್ಕಾಣಿ ಹಿಡಿದಿದ್ದ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ.

ದಾಖಲೆಯ 17 ಬಜೆಟ್: ಹಣಕಾಸು ಸಚಿವರಾಗಿ ಮತ್ತು ಮುಖ್ಯಮಂತ್ರಿಯಾಗಿ ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 17 ಬಜೆಟ್ ಮಂಡಿಸಿದ ಅಪರೂಪದ ದಾಖಲೆ ಇವರ ಹೆಸರಲ್ಲಿದೆ. ಇದು ದೇಶದಲ್ಲೇ ಎರಡನೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆಯಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular