HomeLatest Newsಸಿಕ್ ಲೀವ್ ಕೇಳಿದ್ರೆ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್: ಸೋಶಿಯಲ್ ಮೀಡಿಯಾದಲ್ಲಿ ಕಿಡಿ

ಸಿಕ್ ಲೀವ್ ಕೇಳಿದ್ರೆ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್: ಸೋಶಿಯಲ್ ಮೀಡಿಯಾದಲ್ಲಿ ಕಿಡಿ

ಕಾರ್ಪೊರೇಟ್ ಜಗತ್ತಿನ ವಿಚಿತ್ರ ನಿಯಮಗಳು ಮತ್ತು ಮ್ಯಾನೇಜರ್‌ಗಳ ಕಿರಿಕ್ ಬಗ್ಗೆ ಅಂತೆ-ಕಂತೆಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ, ಇಲ್ಲೊಬ್ಬ ಉದ್ಯೋಗಿ ತನಗೆ ಜ್ವರ ಬಂದಾಗ ರಜೆ ಕೇಳಲು ಹೋಗಿ ಅನುಭವಿಸಿದ ಕಹಿ ಘಟನೆ ಈಗ ಇಂಟರ್ನೆಟ್‌ನಲ್ಲಿ ಭಾರಿ ಕಿಚ್ಚು ಹಚ್ಚಿದೆ. ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ಈ ಪ್ರಸಂಗ, ಭಾರತೀಯ ಕೆಲಸದ ಸಂಸ್ಕೃತಿಯಲ್ಲಿ (Indian Work Culture) ಉದ್ಯೋಗಿಗಳು ಎದುರಿಸುತ್ತಿರುವ ಮಾನಸಿಕ ಒತ್ತಡ ಮತ್ತು ಮ್ಯಾನೇಜರ್‌ಗಳ ಹಸ್ತಕ್ಷೇಪದ ಬಗ್ಗೆ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.

ಏನಿದು ಘಟನೆ?

ರೆಡ್ಡಿಟ್ (Reddit) ಬಳಕೆದಾರರೊಬ್ಬರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ಅವರಿಗೆ ಜ್ವರ ಮತ್ತು ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡಿತ್ತು. ಕೆಲಸದ ಶಿಫ್ಟ್ ಆರಂಭವಾಗುವ ಒಂದು ಗಂಟೆ ಮುನ್ನ ಮ್ಯಾನೇಜರ್‌ಗೆ ಕರೆ ಮಾಡಿ ನಾನು ಅನಾರೋಗ್ಯದ ಕಾರಣ ಸಿಕ್ ಲೀವ್ (Sick Leave) ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

ಇದಕ್ಕೆ ಮ್ಯಾನೇಜರ್ ನೀಡಿದ ಪ್ರತಿಕ್ರಿಯೆಗಳು ಶಾಕಿಂಗ್ ಆಗಿದ್ದವು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರ್ಮಿಷನ್ ಕೇಳ್ತಿದ್ದೀರಾ ಅಥವಾ ಇನ್ಫಾರ್ಮ್ ಮಾಡ್ತಿದ್ದೀರಾ?: ಮ್ಯಾನೇಜರ್ ಮೊದಲು ಉದ್ಯೋಗಿಯ ಮಾತಿನ ಧಾಟಿಯನ್ನು ಪ್ರಶ್ನಿಸಿದರು. ರಜೆ ತೆಗೆದುಕೊಳ್ಳುವಾಗ ಅನುಮತಿ ಕೇಳಬೇಕೇ ಹೊರತು ಮಾಹಿತಿ ನೀಡಬಾರದು ಎಂದು ವಾದಿಸಿದರು.

ಆಸ್ಪತ್ರೆಗೆ ದಾಖಲಾದರೆ ಮಾತ್ರ ರಜೆ?: ಅನಾರೋಗ್ಯದ ರಜೆ ಸಿಗಬೇಕಾದರೆ ಕನಿಷ್ಠ 3 ದಿನ ಆಸ್ಪತ್ರೆಗೆ ದಾಖಲಾಗಿರಬೇಕು ಎಂದು ಮ್ಯಾನೇಜರ್ ಸುಳ್ಳು ನಿಯಮ ಹೇಳಿದರು. ಆದರೆ ಕಂಪನಿಯ ನಿಯಮದ ಪ್ರಕಾರ 2 ದಿನದ ವಿಶ್ರಾಂತಿಗೂ ರಜೆ ಇತ್ತು.

ಖಾಸಗಿ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್: ಉದ್ಯೋಗಿ ವೈದ್ಯರಿಂದ ಸರ್ಟಿಫಿಕೇಟ್ ತಂದು ಅಪ್ಲೈ ಮಾಡಿದರೂ, ಮ್ಯಾನೇಜರ್ ಅದನ್ನು ಒಪ್ಪಲಿಲ್ಲ. ಬದಲಿಗೆ, ನಿಮ್ಮ ಖಾಸಗಿ ಪ್ರಿಸ್ಕ್ರಿಪ್ಷನ್ (ವೈದ್ಯರು ಬರೆದ ಔಷಧಿ ಚೀಟಿ) ನನಗೆ ಮತ್ತು ಟೀಮ್ ಲೀಡ್‌ಗೆ ತೋರಿಸಬೇಕು, ನಾವು ಅದನ್ನು ರಿವ್ಯೂ ಮಾಡಿದ ಮೇಲೆಯೇ ರಜೆ ಅಪ್ರೂವ್ ಮಾಡುವುದು ಎಂದು ಹಠ ಹಿಡಿದರು.

ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆ ಹೇಗಿತ್ತು?

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮ್ಯಾನೇಜರ್ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ:

ಆರೋಗ್ಯವೇ ಮೊದಲು: ಒಬ್ಬ ಬಳಕೆದಾರರು, ಅನಾರೋಗ್ಯದ ರಜೆಯನ್ನು ಮಾಹಿತಿ ನೀಡಲು ಬಳಸುತ್ತಾರೆಯೇ ಹೊರತು ಅನುಮತಿ ಕೇಳಲು ಅಲ್ಲ. ಮ್ಯಾನೇಜರ್‌ಗಿಂತ ನಿಮ್ಮ ಆರೋಗ್ಯ ಮುಖ್ಯ ಎಂದು ಸಲಹೆ ನೀಡಿದ್ದಾರೆ.

ಕಂಪನಿ ನಿಯಮದ ಪ್ರಕಾರ 2 ದಿನದ ವಿಶ್ರಾಂತಿಗೆ ರಜೆ ಇದ್ದರೂ ಮ್ಯಾನೇಜರ್ ಮಾತ್ರ 3 ದಿನ ಆಸ್ಪತ್ರೆಗೆ ದಾಖಲಾದರೆ ಮಾತ್ರ ಸಿಕ್ ಲೀವ್ ಸಿಗುತ್ತೆ ಎಂದು ಸುಳ್ಳು ಹೇಳಿ, ಗಳಿಕೆ ರಜೆ (Earned Leave) ಬಳಸುವಂತೆ ಒತ್ತಡ ಹೇರಿದ್ದಾರೆ.

ಖಾಸಗಿ ಮಾಹಿತಿ ಉಲ್ಲಂಘನೆ: ವೈದ್ಯರು ಬರೆದ ಪ್ರಿಸ್ಕ್ರಿಪ್ಷನ್ ಕೇಳುವುದು ಉದ್ಯೋಗಿಯ ಖಾಸಗಿತನದ ಉಲ್ಲಂಘನೆ. ಇದನ್ನು ಎಚ್‌ಆರ್ (HR) ಗೆ ದೂರು ನೀಡಿ ಎಂದು ಅನೇಕರು ಹೇಳಿದ್ದಾರೆ.

ವಿಚಿತ್ರ ಕಂಪನಿ: ನಾನು ತಲೆನೋವು ಬಂದರೂ ರಜೆ ತೆಗೆದುಕೊಳ್ಳುತ್ತೇನೆ, ಇಂತಹ ಕಂಪನಿಗಳಿಂದ ದೂರವಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular