HomeLatest NewsBIG NEWS: ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವ ಸಮಯದಲ್ಲಿ ಬಾಹ್ಯಾಕಶಕ್ಕೆ ಹೋಗಬಹುದು: ಬೆಂಗಳೂರು ಟ್ರಾಫಿಕ್ ಬಗ್ಗೆ ಶುಭಾಂಶು...

BIG NEWS: ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವ ಸಮಯದಲ್ಲಿ ಬಾಹ್ಯಾಕಶಕ್ಕೆ ಹೋಗಬಹುದು: ಬೆಂಗಳೂರು ಟ್ರಾಫಿಕ್ ಬಗ್ಗೆ ಶುಭಾಂಶು ಶುಕ್ಲ ಕಾಮಿಡಿ

ಬೆಂಗಳೂರು: ಬೆಂಗಳೂರು ಸಮ್ಮಿಟ್ ನಲ್ಲಿ ಪಾಲ್ಗೊಂಡಿರುವ ಗಗನಯಾತ್ರಿ ಶುಭಾಂಶು ಶುಕ್ಲ, ಬೆಂಗಳೂರಿನ ಟ್ರ್ಯಾಫಿಕ್ ಬಗ್ಗೆ ನಗೆ ಚಟಾಕಿ ಹಾರಿಸಿದ್ದಾರೆ.

ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವ ಸಮಯದಲ್ಲಿ ಬಾಹ್ಯಾಕಾಶಕ್ಕೆ ತಲುಪಬಹುದು ಎಂದು ಹೇಳುವ ಮೂಲಕ ಬೆಂಗಳೂರು ಟ್ರಾಫಿಕ್ ಬಗ್ಗೆ ಕಾಮಿಡಿ ಮಾಡಿದ್ದಾರೆ. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಎದುರಲ್ಲೇ ಶುಭಾಂಶು ನಗೆ ಚಟಾಕಿ ಹಾರಿಸಿದ್ದಾರೆ.

ಬಾಹ್ಯಾಕಾಶದಿಂದ ಬೆಂಗಳೂರಿಗೆ ಬರುವುದು ಸುಲಭ. ಆದರೆ ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವುದು ಕಷ್ಟ. ಮಾರತ್ತಹಳ್ಳಿಯಿಂದ ಮಾದಾವರಕ್ಕೆ ತಲುಪುವ ಸಮಯಕ್ಕಿಂತ ವೇಗವಾಗಿ ಬಾಹ್ಯಾಕಾಶಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶುಭಾಂಶು ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಇನ್ಮುಂದೆ ಇಷ್ಟೊಂದು ಟ್ರಾಫಿಕ್ ಸಮಸ್ಯೆ ಇರಲ್ಲ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಗುತ್ತಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular