HomeIPL 2026ಇದಕ್ಕೆ ಅತಿಯಾದ ಕೊಬ್ಬು ಒಳ್ಳೆಯದಲ್ಲ ಅನ್ನೋದು: ಮಳೆ ಬಂತು ಫ್ರೀ ಪಾಯಿಂಟ್ ಮಜಾ ಮಾಡಿ ಎಂದು...

ಇದಕ್ಕೆ ಅತಿಯಾದ ಕೊಬ್ಬು ಒಳ್ಳೆಯದಲ್ಲ ಅನ್ನೋದು: ಮಳೆ ಬಂತು ಫ್ರೀ ಪಾಯಿಂಟ್ ಮಜಾ ಮಾಡಿ ಎಂದು ಕುಣಿದಿದ್ದ ಶ್ರೇಯಸ್ ಐಯ್ಯರ್ ಸಹೋದರಿ ಪಾಡು ಇಂದು ಅಯ್ಯೋ ಪಾಪ!

ನಿನ್ನೆ ( ಮೇ 17 ) ಧರಂಶಾಲಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಐಯ್ಯರ್ ಹಾಗೂ ಟಿಮ್ ಡೇವಿಡ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 223 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು.

ಟೂರ್ನಿಯ ಆರಂಭದಲ್ಲಿ ಸತತ ಆರು ಗೆಲುವುಗಳನ್ನು ಕಂಡು ಸೋಲಿಲ್ಲದ ಸರದಾರರಾಗಿ ಮೆರೆದಿದ್ದ ಪಂಜಾಬ್ ಕಿಂಗ್ಸ್ ನಿನ್ನೆ ಸತತ ಆರನೇ ಸೋಲನ್ನು ಕಂಡು ಸದ್ಯ ಪ್ಲೇಆಫ್‌ಗೆ ದಾರಿ ಯಾವುದಯ್ಯ ಎಂದು ಕಂಗಾಲಾಗಿದೆ. ಹೌದು, ಒಟ್ಟು 13 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ಆರು ಪಂದ್ಯಗಳಲ್ಲಿ ಗೆದ್ದು, ಆರು ಪಂದ್ಯಗಳಲ್ಲಿ ಸೋತಿದ್ದು, ಉಳಿದೊಂದು ಪಂದ್ಯ ಮಳೆಯಿಂದ ರದ್ದಾದ ಕಾರಣ 13 ಅಂಕಗಳನ್ನು ಹೊಂದಿದ್ದು, ಉಳಿದ ಪಂದ್ಯ ಗೆದ್ದರೂ 15 ಅಂಕಗಳಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗಾಗಿ ಸದ್ಯ ಸನ್ ರೈಸರ್ಸ್ ಅಥವಾ ಚೆನ್ನೈ ತಂಡಗಳು ಉಳಿದ ಪಂದ್ಯಗಳನ್ನು ಸೋತು ಪ್ಲೇಆಫ್ ಪ್ರವೇಶಕ್ಕೆ 15 ಅಂಕ ಕನಿಷ್ಟವಾಗಲಿ ಎಂದು ಪಂಜಾಬ್ ಫ್ಯಾನ್ಸ್ ಬೇಡಿಕೊಳ್ಳುತ್ತಿದ್ದಾರೆ.

ಟೂರ್ನಿಯ ಆರಂಭದಲ್ಲಿ ಸೋಲನ್ನೇ ಕಾಣದೇ ಮೆರೆದಿದ್ದ ಪಂಜಾಬ್ ಕಿಂಗ್ಸ್ ಇಂದು ಒಂದು ಅಂಕ ಇದ್ದಿದ್ದರೂ ಇಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ ಎನ್ನಬಹುದು. ಹೌದು, ಏಪ್ರಿಲ್ 6ರಂದು ಪಂಜಾಬ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ ಮಳೆಯಿಂದ ರದ್ದಾಗಿತ್ತು.

ಆದರೆ ಅಂದು ಬಲಿಷ್ಠ ತಂಡ ಎನಿಸಿಕೊಂಡಿದ್ದ ಕಾರಣ ಕೊಲ್ಕತ್ತಾಗೆ ಒಂದು ಅಂಕ ಸಿಕ್ಕಿದ್ದು ಅದೃಷ್ಟ ಎಂದೇ ಇಡೀ ಸಾಮಾಜಿಕ ಜಾಲತಾಣ ಟ್ರೋಲ್ ಮಾಡಿತ್ತು. ಅಷ್ಟೇ ಯಾಕೆ ಶ್ರೇಯಸ್ ಐಯ್ಯರ್ ಸಹೋದರಿ ಶ್ರೇಷ್ಠ ಐಯ್ಯರ್ ಹುಚ್ಚುಬಂದಂತೆ ಕುಣಿದು ಸಂಭ್ರಮಿಸಿದ್ದಳು. ಕ್ರಿಕೆಟ್‌ನಲ್ಲಿ ಒಂದು ಅಂಕದ ಮಹತ್ವ ಏನು ಎಂಬುದರ ಪರಿಜ್ಞಾನವಿಲ್ಲದೇ ಒಂದು ಅಂಕ ಮಜಾ ಮಾಡಿ ಎಂದು ಕೆಕೆಆರ್ ತಂಡದ ಹೆಸರನ್ನು ಹೇಳಿ ತನ್ನ ಡಾನ್ಸ್ ಗ್ಯಾಂಗ್‌ ಜತೆ ಕುಣಿದು ಕುಪ್ಪಳಿಸಿದ್ದಳು.

ಇಂದು ಆಕೆ ಮಾಡಿದ್ದ ಸರ್ಕಸ್ ಡಾನ್ಸ್ ವೈರಲ್ ಆಗಿದ್ದು, ಗೆಲುವಿಗೂ ಮುಂಚೆ ಸಂಭ್ರಮಿಸುವುದು ಸರಿಯಲ್ಲ ಎಂದು ನೆಟ್ಟಿಗರು ಶ್ರೇಯಸ್ ಐಯ್ಯರ್ ಸಹೋದರಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಸಹೋದರ ಖ್ಯಾತಿ ಗಳಿಸಿದ ಎಂದು ಕುರುಡರಂತೆ ಆತನ ಸಹೋದರಿಯನ್ನು ಹಿಂಬಾಲಿಸಿ ಆಕೆಯ ಬಾಲಿಷ ನಟನೆಗೆ ಸೈ ಎಂದ ಜನರಿಗೂ ಸಹ ನೆಟ್ಟಿಗರು ಮುಖ ಒರೆಸಿಕೊಳ್ಳುವ ಹಾಗೆ ಬುದ್ದಿವಾದ ಹೇಳಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular