ಬೆಂಗಳೂರು : ಇಂಗ್ಲೆಂಡ್ ಮಣ್ಣಿನಲ್ಲಿ ಸತತ ಎರಡು ಗೆಲುವು ದಾಖಲಿಸಿ ಭರ್ಜರಿ ಫಾರ್ಮ್ನಲ್ಲಿದ್ದ ಭಾರತದ ವನಿತಾ ಪಡೆಗೆ (Indian Women’s Cricket Team) ಜೂನ್ 19ರ ಇಂದು ಸಿಡಿಲು ಬಡಿದಂತಾಗಿದೆ ತಂಡದ ಕೀ ಸ್ಪಿನ್ ಆಲ್ರೌಂಡರ್, ಕರ್ನಾಟಕದ ಹೆಮ್ಮೆ ಶ್ರೇಯಾಂಕಾ ಪಾಟೀಲ್ ಪಾದದ ಗಂಭೀರ ಗಾಯದ ಹಿನ್ನೆಲೆಯಲ್ಲಿ ಇಡೀ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಅಧಿಕೃತವಾಗಿ ಹೊರಬಿದ್ದಿದ್ದಾರೆ.ಶ್ರೇಯಾಂಕಾ ಅವರ ಈ ದಿಢೀರ್ ಅಲಭ್ಯತೆ ಟೀಮ್ ಇಂಡಿಯಾದ ವಿಶ್ವಕಪ್ ಕನಸಿಗೆ ದೊಡ್ಡ ಹೊಡೆತ ಕೊಟ್ಟಿದೆ. ಆದರೆ ಇದೇ ಬೆನ್ನಲ್ಲೇ ಮತ್ತೊಬ್ಬ ಆರ್ಸಿಬಿ (RCB) ಆಟಗಾರ್ತಿಗೆ ಅದೃಷ್ಟ ಖುಲಾಯಿಸಿದ್ದು, ಟೀಮ್ ಇಂಡಿಯಾ ಕ್ಯಾಂಪ್ಗೆ ಸಡನ್ ಎಂಟ್ರಿ ಕೊಟ್ಟಿದ್ದಾರೆ
ಮೈದಾನದಲ್ಲೇ ಸ್ಟ್ರೆಚರ್ ಮೇಲೆ ಮಲಗಿ ಕಣ್ಣೀರಿಟ್ಟ ಶ್ರೇಯಾಂಕಾ ಆಗಿದ್ದೇನು?
ಬುಧವಾರ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಈ ದುರಂತ ಸಂಭವಿಸಿದೆ. ನೆದರ್ಲ್ಯಾಂಡ್ಸ್ ಇನ್ನಿಂಗ್ಸ್ನ 6ನೇ ಓವರ್ ಎಸೆಯಲು ಬಂದ ಶ್ರೇಯಾಂಕಾ, ಮೊದಲ ಎಸೆತದಲ್ಲೇ ಚೆಂಡನ್ನು ಫೀಲ್ಡ್ ಮಾಡಲು ಸ್ವತಃ ತಾವೇ ಓಡಿದ್ದರು.
ಚೆಂಡನ್ನು ಹಿಡಿಯಲು ಕೆಳಕ್ಕೆ ಬಾಗಿದಾಗ ಬ್ಯಾಲೆನ್ಸ್ ತಪ್ಪಿ ಅವರ ಬಲಗಾಲಿನ ಪಾದ ಭೀಕರವಾಗಿ ಉಳುಕಿತು! ತೀವ್ರ ನೋವಿನಿಂದ ಶ್ರೇಯಾಂಕಾ ಮೈದಾನದಲ್ಲೇ ಬಿದ್ದು ನರಳಾಡಿದರು. ನೋವು ಎಷ್ಟಿತ್ತೆಂದರೆ ಅವರಿಗೆ ಕನಿಷ್ಠ ಎದ್ದು ನಿಲ್ಲಲು ಸಹ ಸಾಧ್ಯವಾಗಲಿಲ್ಲ. ಕೊನೆಗೆ ಸ್ಟ್ರೆಚರ್ ತರಿಸಿ, ಅದರ ಮೇಲೆ ಮಲಗಿಸಿಕೊಂಡು ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಅವರ ಗಾಯ ಗಂಭೀರವಾಗಿರೋದ್ರಿಂದ ಟೂರ್ನಿಯಿಂದ ಕೈಬಿಡಲಾಗಿದೆ.
ಆರ್ಸಿಬಿಯ ಪ್ರೇಮಾ ರಾವತ್ಗೆ ಒಲಿದ ಅದೃಷ್ಟದ ಲಾಟರಿ
ಐಸಿಸಿ (ICC) ತಾಂತ್ರಿಕ ಸಮಿತಿಯ ಒಪ್ಪಿಗೆಯೊಂದಿಗೆ ಶ್ರೇಯಾಂಕಾ ಪಾಟೀಲ್ ಜಾಗಕ್ಕೆ 24 ವರ್ಷದ ಅನ್ಕ್ಯಾಪ್ಡ್ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ (Prema Rawat) ಅವರನ್ನು ಕರೆಯಿಸಿಕೊಳ್ಳಲಾಗಿದೆ.
RCB ಕನೆಕ್ಷನ್: ಪ್ರೇಮಾ ರಾವತ್ ಬೇರೆ ಯಾರೂ ಅಲ್ಲ, ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (WPL) ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿ 6 ಪಂದ್ಯಗಳಲ್ಲಿ 3 ವಿಕೆಟ್ ಕಿತ್ತಿದ್ದ ಪ್ರತಿಭೆ
ಭಾರತ ಎ ತಂಡದ ಪರ ಆಡಲು ಪ್ರೇಮಾ ಈಗಾಗಲೇ ಇಂಗ್ಲೆಂಡ್ನಲ್ಲೇ ಇದ್ದಿದ್ದರಿಂದ, ತಕ್ಷಣವೇ ಅವರನ್ನು ಹಿರಿಯರ ತಂಡಕ್ಕೆ ಸೇರಿಕೊಳ್ಳಲು ಸೂಚಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಇವರಿಗೆ ಚಾನ್ಸ್ ಸಿಕ್ಕರೆ ಇದು ಅವರ ಡೆಬ್ಯೂ (ಪದಾರ್ಪಣೆ) ಪಂದ್ಯವಾಗಲಿದೆ.
ಮುಂದಿನ ಫೈಟ್ ಸೌತ್ ಆಫ್ರಿಕಾ ಜೊತೆ; ಜೂನ್ 21ಕ್ಕೆ ಬಿಗ್ ಮ್ಯಾಚ್
ವಿಶ್ವಕಪ್ನಲ್ಲಿ ಸತತ 2 ಗೆಲುವಿನೊಂದಿಗೆ ಅಜೇಯವಾಗಿ ಮುನ್ನುಗ್ಗುತ್ತಿರುವ ಭಾರತ ತಂಡ ಜೂನ್ 21ರ ಭಾನುವಾರ ಮ್ಯಾಂಚೆಸ್ಟರ್ನ ಐತಿಹಾಸಿಕ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಶ್ರೇಯಾಂಕಾ ಇಲ್ಲದಿದ್ದರೂ ಹ್ಯಾಟ್ರಿಕ್ ಗೆಲುವಿನ ಮೇಲೆ ಹರ್ಮನ್ಪ್ರೀತ್ ಕೌರ್ ಪಡೆ ಕಣ್ಣಿಟ್ಟಿದೆ.

