HomeLatest NewsBIG NEWS: ಶ್ರೀಶೈಲಂ ದೇವಾಲಯದ ಬಳಿ ಕಾರಿನಲ್ಲಿ 30 ಲಕ್ಷ ಹಣ ಪತ್ತೆ!

BIG NEWS: ಶ್ರೀಶೈಲಂ ದೇವಾಲಯದ ಬಳಿ ಕಾರಿನಲ್ಲಿ 30 ಲಕ್ಷ ಹಣ ಪತ್ತೆ!

ಅಮರಾವತಿ: ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ ಬರೋಬ್ಬರಿ 400 ಕೋಟಿ ದರೋಡೆ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಎಟಿಎಂಗೆ ಹಾಕಲು ಕೊಟ್ಟಿದ್ದ 1 ಕೋಟಿಗೂ ಅಧಿಕ ಹಣದ ಸಮೇತ ಸಿಬ್ಬಂದಿಗಳೇ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಎರಡೂ ಪ್ರಕರಣಗಳ ತನಿಖೆ ಮುಂದುವರೆದಿರುವಾಗಲೇ ಶ್ರೀಶೈಲಂ ದೇವಾಲಯದ ಬಳಿ ಕಾರಿನಲ್ಲಿ 30 ಲಕ್ಷ ಹಣ ಪತ್ತೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಆಂಧ್ರಪ್ರದೆಷದ ಶ್ರೀಶೈಲಂ ದೇವಸ್ಥಾನದ ಬಳಿ ಮಹಾರಾಷ್ಟ್ರದ ನೋಂದಣಿ ಇರುವ ಕಾರಿನಲ್ಲಿ ಬರೋಬ್ಬರಿ 30 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ದೇವಾಲಯದ ಬಳಿ ಪರಿಶೀಲನೆ ವೇಳೆ ಕಿಯಾ ಕಾರಿನಲ್ಲಿ ಈ ಪ್ರಮಾಣದ ಹಣ ಭದ್ರತಾಪಡೆ ತಪಾಸಣೆ ವೇಳೆ ಸಿಕ್ಕಿದೆ.

ಮಹಾಶಿವರಾತ್ರಿ ಬ್ರಹ್ಮೋತ್ಸವದ ಸಿದ್ಧತೆಗಾಗಿ ಶ್ರೀಶೈಲಂಗೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭ್ರದ್ರತಾ ದೃಷ್ಟಿಯಿಂದ ವಾಹನಗಳ ಮೇಲೆ ನಿಗಾ ವಹಿಸಲಾಗಿದ್ದು, ತಪಾಸಣೆ ಹೆಚ್ಚಿಸಲಾಗಿದೆ. ಹೀಗೆ ವಾಹನ ತಪಾಸಣೆ ನಡೆಸುವಾಗ ಕಿಯಾ ಕರೊಂದನ್ನು ತಡೆದು ನಿಲ್ಲಿಸಿತ್ತು. ಕಾರಿನಲ್ಲಿ ಪರಿಶೀಲಿಸಿದಾಗ ಹಣತುಂಬಿದ್ದ ಬ್ಯಾಗ್ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರಿನ ಚಾಲಕ ಹಾಗೂ ಪ್ರಯಾಣಿಕನನ್ನು ಭದ್ರತಾ ಅಧಿಕಾರಿಗಳು ವಿಚಾರಿಸಿದಾಗ ತಮ್ಮದು ಚಿನ್ನದ ವ್ಯವಹಾರವಿದೆ. ದೇವರ ದರ್ಶನಕ್ಕೆಂದು ಶ್ರೀಶೈಲಂ ಗೆ ಬಂದಿರುವುದಾಗಿ ಹೇಳಿದ್ದಾರೆ. ಆದರೆ ಹಣದ ಮೂಲದ ಬಗ್ಗೆ ಯಾವುದೇ ದಾಖಲೆ ಹಾಗೂ ವಿವರ ನೀಡಲು ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿ, ಶ್ರೀಶೈಲಂ ಪಟ್ಟಣ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. 30 ಲಕ್ಷ ರೂಪಾಯಿ ಹಣದ ಮೂಲವೇನು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular