HomeKarnatakaಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ಶ್ರೀನಂದಾ ಮಾಣಿಕ್ಯಧಾರದ 2000 ಅಡಿ ಆಳದಲ್ಲಿ ಶವವಾಗಿ ಪತ್ತೆ: ಸಾವಿನ ಸುತ್ತ...

ಪ್ರವಾಸಕ್ಕೆ ಬಂದು ನಾಪತ್ತೆಯಾಗಿದ್ದ ಶ್ರೀನಂದಾ ಮಾಣಿಕ್ಯಧಾರದ 2000 ಅಡಿ ಆಳದಲ್ಲಿ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಚಿಕ್ಕಮಗಳೂರು: ಕೇರಳಂ ನಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಶ್ರೀನಂದಾ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಬಳಿಕ ಆಕೆಯ ಶವ ಮಾಣಿಕ್ಯಧಾರದಲ್ಲಿ ಪತ್ತೆಯಾಗಿದೆ.

ಚಿಕ್ಕಮಗಳೂರಿನ ಮಾಣಿಕ್ಯಧಾರಾದಲ್ಲಿ ಬಾಲಕಿ ಶ್ರೀನಂದಾ (14) ಶವವಾಗಿ ಪತ್ತೆಯಾಗಿದ್ದಾಳೆ. ಏಪ್ರಿಲ್ 7ರಂದು ಕೇರಳಂ ನಿಂದ ಪೋಷಕರು ಹಾಗೂ ಸಂಬಂಧಿಕರ ಜೊತೆ ಶ್ರೀನಂದಾ ಚಿಕ್ಕಮಗಳೂರಿನ ಪ್ರಸಿದ್ಧ ತಾಣಗಳಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಶ್ರೀನಂದಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಕಳೆದ ನಾಲ್ಕು ದಿನಗಳಿಂದ ಆಕೆಗಾಗಿ ಶೋಧಕಾರ್ಯ ನಡೆಸಲಾಗುತ್ತಿತ್ತು. ಆದರೆ ಎಲ್ಲಿಯೂ ಆಕೆಯ ಸುಳಿವು ಸಿಕ್ಕಿರಲಿಲ್ಲ.

ಬಾಲಕಿ ಶ್ರೀನಂದಾ ಮಾಣಿಕ್ಯಧಾರಾ ಕಡೆಗೆ ಹೋಗುತ್ತಿದ್ದಾಗ ಚಿತ್ರಿಸಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಆಕೆ ವಾಪಸ್ ಆದ ಬಗ್ಗೆ ಮಾಹಿತಿ ಇರಲಿಲ್ಲ. ಈ ಹಿನ್ನಲೆಯಲ್ಲಿ ಈ ವಿಡಿಯೋ ಆಧರಿಸಿ ಡ್ರೋನ್ ಕ್ಯಾಮರಾ ಹಾಗೂ ಹಲವು ವಿಶೇಷ ಕ್ಯಾಮರಾಗಳ ಮೂಲಕ ಇಂದು ಎಸ್ ಡಿ ಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮಾಣಿಕ್ಯಧಾರಾದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಶ್ರೀನಂದಾ ಶವ ಮಣಿಕ್ಯಧಾರದ 2000 ಅಡಿ ಆಳದಲ್ಲಿ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2000 ಅಡಿಯಲ್ಲಿ ಪತ್ತೆಯಾಗಿರುವ ಬಾಲಕಿಯ ಶವವನ್ನು ಮೇಲಕ್ಕೆತ್ತುವುದು ಕೂಡ ಸವಾಲಾಗಿದೆ. ಬಾಲಕಿ ಶ್ರೀನಂದಾ ಅವರ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ವ್ಯಕ್ತವಾಗಿದೆ. ಕಾರಣ ಮಾಣಿಕ್ಯಧಾರಾ ತಡೆಗೋಡೆ ದಾಟಿ ಕಾಲು ಜಾರಿ ಆಕೆ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿರಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಅಲ್ಲದೇ ಪೋಷಕರ ಮಾತುಗಳು ಕೆಲ ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀನಂದಾ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಟ್ಟಿನಲ್ಲಿ ತನಿಖೆ ನಡೆಯಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular