HomeLatest NewsBIG NEWS : ಮಕ್ಕಳಿಗಾಗಿ ಬಂತು ಗೂಗಲ್ ಪೇ ‘ಪಾಕೆಟ್ ಮನಿ’ ಫೀಚರ್; ಪೋಷಕರಿಗೆ ಇರಲಿದೆ...

BIG NEWS : ಮಕ್ಕಳಿಗಾಗಿ ಬಂತು ಗೂಗಲ್ ಪೇ ‘ಪಾಕೆಟ್ ಮನಿ’ ಫೀಚರ್; ಪೋಷಕರಿಗೆ ಇರಲಿದೆ ಫುಲ್ ಕಂಟ್ರೋಲ್!

ಮುಂಬೈ  : ಗೂಗಲ್ ಪೇ (Google Pay) ತನ್ನ ಬಳಕೆದಾರರಿಗಾಗಿ “ಪಾಕೆಟ್ ಮನಿ” ಎಂಬ ವಿನೂತನ ಫೀಚರ್ ಪರಿಚಯಿಸಿದೆ. ಇದು ಪೋಷಕರು ತಮ್ಮ ಮಕ್ಕಳ ಡಿಜಿಟಲ್ ಖರ್ಚು-ವೆಚ್ಚಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ‘ಯುಪಿಐ ಸರ್ಕಲ್’ (UPI Circle) ಆಧಾರದ ಮೇಲೆ ಕಾರ್ಯನಿರ್ವಹಿಸುವ ಈ ಫೀಚರ್ ಮೂಲಕ, ಮಕ್ಕಳಿಗೆ ಪ್ರತ್ಯೇಕ ಬ್ಯಾಂಕ್ ಖಾತೆ ಇಲ್ಲದಿದ್ದರೂ ಅವರು ಡಿಜಿಟಲ್ ಪಾವತಿಗಳನ್ನು ಮಾಡಬಹುದಾಗಿದೆ.

ಪಾಕೆಟ್ ಮನಿ ಫೀಚರ್ ಹೇಗೆ ಕೆಲಸ ಮಾಡುತ್ತದೆ ?

ಈ ವ್ಯವಸ್ಥೆಯಲ್ಲಿ ಪೋಷಕರು ‘ಪ್ರಾಥಮಿಕ ಬಳಕೆದಾರ’ರಾಗಿರುತ್ತಾರೆ (Primary User). ಅವರು ತಮ್ಮ ಬ್ಯಾಂಕ್ ಖಾತೆಯನ್ನು ಮಗುವಿನ (Secondary User) ಫೋನ್ ಸಂಖ್ಯೆಗೆ ಲಿಂಕ್ ಮಾಡಬಹುದು. ಇದರಿಂದ ಮಗುವು ಪೋಷಕರ ಖಾತೆಯ ಮೂಲಕವೇ ಹಣ ಪಾವತಿಸಬಹುದು, ಆದರೆ ಇದಕ್ಕೆ ಪೋಷಕರು ನಿಗದಿಪಡಿಸಿದ ಮಿತಿ ಮತ್ತು ನಿಯಮಗಳು ಅನ್ವಯವಾಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದರ ಪ್ರಯೋಜನ

ಖರ್ಚಿನ ಮಿತಿ(Spending Limit): ಪೋಷಕರು ತಮ್ಮ ಮಕ್ಕಳಿಗೆ ತಿಂಗಳಿಗೆ ಗರಿಷ್ಠ 15,000 ರೂಪಾಯಿಗಳವರೆಗೆ ಖರ್ಚಿನ ಮಿತಿಯನ್ನು ನಿಗದಿಪಡಿಸಬಹುದು.

ಅನುಮೋದನೆ ಮೋಡ್(Approval Mode): ಮಗುವು ಯಾವುದೇ ಪಾವತಿ ಮಾಡಲು ಮುಂದಾದಾಗ, ಪೋಷಕರ ಮೊಬೈಲ್‌ಗೆ ನೋಟಿಫಿಕೇಶನ್ ಬರುತ್ತದೆ. ಪೋಷಕರು ಅದನ್ನು ಅನುಮೋದಿಸಿದರೆ (Approve) ಮಾತ್ರ ಹಣ ವರ್ಗಾವಣೆಯಾಗುತ್ತದೆ.

ರಿಯಲ್ ಟೈಮ್ ಟ್ರ್ಯಾಕಿಂಗ್ : ಮಕ್ಕಳು ಎಲ್ಲೆಲ್ಲಿ, ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಮಾಹಿತಿ ಪೋಷಕರಿಗೆ ತಕ್ಷಣವೇ ಲಭ್ಯವಾಗುತ್ತದೆ.

ಯಾವಾಗ ಬೇಕಿದ್ದರೂನಿಲ್ಲಿಸಬಹುದು: ಪೋಷಕರು ಯಾವಾಗ ಬೇಕಾದರೂ ಈ ಸೇವೆಯನ್ನು ಸ್ಥಗಿತಗೊಳಿಸುವ (Pause/Stop) ಅಧಿಕಾರ ಹೊಂದಿರುತ್ತಾರೆ.

ಪಾಕೆಟ್ ಮನಿ ಸೆಟ್ ಅಪ್ ಮಾಡುವುದು ಹೇಗೆ?

  1. ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪೇ ಆಪ್ ಓಪನ್ ಮಾಡಿ.
  2. ಪ್ರೊಫೈಲ್ (Profile) ವಿಭಾಗಕ್ಕೆ ಹೋಗಿ ‘UPI Circle’ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಮಗುವಿನ ಹೆಸರು ಅಥವಾ ಫೋನ್ ಸಂಖ್ಯೆಯನ್ನು ಸರ್ಚ್ ಮಾಡಿ.
  4. ಅವರ ಕಾಂಟ್ಯಾಕ್ಟ್ ಆಯ್ಕೆ ಮಾಡಿ ಅಥವಾ ಅವರ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.
  5. ನಂತರ ಪಾವತಿಯ ಮಿತಿ ಮತ್ತು ಅನುಮೋದನೆಯ ಸೆಟ್ಟಿಂಗ್‌ಗಳನ್ನು ಪೂರ್ಣಗೊಳಿಸಿ.

ವೈರಲ್ ಸುಳ್ಳು ಸುದ್ದಿಯ ಬಗ್ಗೆ ಎಚ್ಚರ!

ಸೋಷಿಯಲ್ ಮೀಡಿಯಾದಲ್ಲಿ “ಪಾಕೆಟ್ ಮನಿ ಬಟನ್ ಒತ್ತಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತದೆ” ಎಂಬ ಸಂದೇಶಗಳು ಹರಿದಾಡುತ್ತಿವೆ. ಆದರೆ, ಇದು ಸಂಪೂರ್ಣ ಸುಳ್ಳು ಮತ್ತು ಹಾದಿ ತಪ್ಪಿಸುವಸುದ್ದಿ ಎಂದು ಸ್ಪಷ್ಟಪಡಿಸಲಾಗಿದೆ. ಈ ಫೀಚರ್ ಸುರಕ್ಷಿತವಾಗಿದ್ದು, ಬಳಕೆದಾರರಲ್ಲಿ ಭಯ ಹುಟ್ಟಿಸಲು ಇಂತಹ ವದಂತಿಗಳನ್ನು ಹರಡಲಾಗುತ್ತಿದೆ. ಗೂಗಲ್ ಪೇ ಇಂಟರ್ಫೇಸ್‌ನಲ್ಲಿ ಇಂತಹ ಯಾವುದೇ ಬೆದರಿಕೆ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗಮನಿಸಿ: ಪೋಷಕರು ಗರಿಷ್ಠ 5 ಜನ ಸೆಕೆಂಡರಿ ಬಳಕೆದಾರರನ್ನು (ಮಕ್ಕಳು ಅಥವಾ ಕುಟುಂಬದ ಇತರರು) ತಮ್ಮ ಯುಪಿಐ ಸರ್ಕಲ್‌ಗೆ ಸೇರಿಸಿಕೊಳ್ಳಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular