HomeLatest NewsCanada : ಕೆನಡಾದಲ್ಲಿ ಗುಂಡಿನ ದಾಳಿ : ಭಾರತೀಯ ಮೂಲದ ಇಬ್ಬರು ಯುವಕರು ಸಾವು.!

Canada : ಕೆನಡಾದಲ್ಲಿ ಗುಂಡಿನ ದಾಳಿ : ಭಾರತೀಯ ಮೂಲದ ಇಬ್ಬರು ಯುವಕರು ಸಾವು.!

ಕೆನಡಾದಲ್ಲಿ ಗನ್ ಕಲ್ಚರ್ ಮತ್ತೆ ಆತಂಕ ಸೃಷ್ಟಿಸಿದೆ. ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಇಬ್ಬರು ಹದಿಹರೆಯದ ಯುವಕರು ಮೃತಪಟ್ಟಿದ್ದು, ಅಲ್ಲಿನ ವಲಸಿಗರಲ್ಲಿ ಭೀತಿ ಮೂಡಿಸಿದೆ.

ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆ (Surrey) ನಗರದಲ್ಲಿ ಈ ದುರ್ಘಟನೆ ನಡೆದಿದೆ. ಮೇ 10ರಂದು ರಾತ್ರಿ ಸುಮಾರು 10 ಗಂಟೆಗೆ.ನ್ಯೂಟನ್ ಪ್ರದೇಶದ 133ಬಿ ಸ್ಟ್ರೀಟ್‌ನಲ್ಲಿ ಗುಂಡಿನ ಸದ್ದು ಕೇಳಿಬಂದಿದೆ.ಮೃತಪಟ್ಟವರು 16 ಮತ್ತು 18 ವರ್ಷದ ಇಬ್ಬರು ಯುವಕರು ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ತುರ್ತು ಚಿಕಿತ್ಸಾ ಸಿಬ್ಬಂದಿ ಸ್ಥಳಕ್ಕೆ ತಲುಪಿ ಸಿಪಿಆರ್ (CPR) ನೀಡಲು ಪ್ರಯತ್ನಿಸಿದರೂ, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಅವಳಿ ಕೊಲೆ ಪ್ರಕರಣವನ್ನು ಕೆನಡಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.ಸರ್ರೆ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಜೊತೆಗೆ ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್ (IHIT) ತನಿಖೆ ಆರಂಭಿಸಿದೆ.ಇದು ಪೂರ್ವಯೋಜಿತ ದಾಳಿಯೇ (Targeted Shooting) ಅಥವಾ ಗ್ಯಾಂಗ್ ವಾರ್‌ಗೆ ಸಂಬಂಧಿಸಿದ್ದೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ . ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಡ್ಯಾಶ್‌ಕ್ಯಾಮ್ ವಿಡಿಯೋಗಳನ್ನು ಪರಿಶೀಲಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳೀಯರಲ್ಲಿ ಆತಂಕ

ಪಂಜಾಬಿಗಳು ಮತ್ತು ಭಾರತೀಯ ಮೂಲದವರು ಹೆಚ್ಚಾಗಿ ವಾಸಿಸುವ ಸರ್ರೆ ನಗರದಲ್ಲಿ ಇಂತಹ ಹಿಂಸಾಚಾರಗಳು ಹೆಚ್ಚುತ್ತಿರುವುದು ಪ್ರವಾಸಿ ಭಾರತೀಯರಲ್ಲಿ ಆತಂಕ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದ್ದಲ್ಲಿ ತನಿಖಾ ಸಂಸ್ಥೆಗಳಿಗೆ ತಿಳಿಸುವಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular