HomeCrimeSHOCKING : ಪತ್ನಿಯ ಕತ್ತು, ಅಂಗಾಂಗ ಕತ್ತರಿಸಿ ಬರ್ಬರ ಹತ್ಯೆ : ವಿಕೃತಿ ಮೆರೆದ ಪಾಪಿ...

SHOCKING : ಪತ್ನಿಯ ಕತ್ತು, ಅಂಗಾಂಗ ಕತ್ತರಿಸಿ ಬರ್ಬರ ಹತ್ಯೆ : ವಿಕೃತಿ ಮೆರೆದ ಪಾಪಿ ಪತಿ ಅರೆಸ್ಟ್..!

ತುಮಕೂರು : ಪತ್ನಿಯ ಕತ್ತು, ಅಂಗಾಗ ಕತ್ತರಿಸಿ ಬರ್ಬರ ಹತ್ಯೆ ಮಾಡಿ ವಿಕೃತಿ ಮೆರೆದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಪಟ್ಟಣದ ಹೊಸಪೇಟೆಯಲ್ಲಿ ನಡೆದಿದೆ.

ಶಿವರಾಮ್ ಎಂಬ ಪತಿ ತನ್ನ ಪತ್ನಿ ಪುಷ್ಪಾ(22) ರವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆರೋಪಿ ಶಿವರಾಮ್ ಶಾಮಿಲ್ ವೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದನು. ಪತಿ ಹಾಗೂ ಪತ್ನಿ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು. ನಿನ್ನೆ ಪತಿ ಹಾಗೂ ಪತ್ನಿ ನಡುವೆ ಜಗಳ ವಿಕೋಪಕ್ಕೆ ಹೋಗಿದ್ದು, ಸಿಟ್ಟಿಗೆದ್ದ ಗಂಡ ಮಾರಕಾಸ್ತ್ತಗಳಿಂದ ಪತ್ನಿಯ ಕತ್ತು, ಅಂಗಾಗ ಕತ್ತರಿಸಿ ಬರ್ಬರ ಹತ್ಯೆ ಮಾಡಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಆರೋಪಿ ಶಿವರಾಮ್ ನನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಆರೋಪಿ ಶಿವರಾಮ್ ಶಿವsಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ ಎಂಬುವವರನ್ನು ಮದುವೆಯಾಗಿದ್ದನು. ಆದರೆ ಪಾಪಿ ಗಂಡ ಹೆಂಡತಿಯನ್ನೇ ವಿಕೃತವಾಗಿ ಕೊಂದು ಜೈಲು ಸೇರಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular