HomeIndiaದಾರುಣ ಘಟನೆ : ಮಲಗಿದ್ದಲ್ಲೇ ಮೃತಪಟ್ಟ ಒಂದೇ ಕುಟುಂಬದ ಐವರು ಮಕ್ಕಳು

ದಾರುಣ ಘಟನೆ : ಮಲಗಿದ್ದಲ್ಲೇ ಮೃತಪಟ್ಟ ಒಂದೇ ಕುಟುಂಬದ ಐವರು ಮಕ್ಕಳು

ಲಕ್ನೋ  : ಒಂದೇ ಕುಟುಂಬದ ಐವರು ಮಕ್ಕಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ದಾರುಣ ಘಟನೆಉತ್ತರ ಪ್ರದೇಶದ  ಅಮ್ರೋಹಾದಲ್ಲಿ ನಡೆದಿದೆ.

ಮನೆಯೊಳಗೆ ಕಲ್ಲಿದ್ದಲು ಬ್ರೇಜಿಯರ್ ಸುಟ್ಟ ಪರಿಣಾಮ ಮನೆಯಲ್ಲಿ ಹೊಗೆ ತುಂಬಿದ್ದು, ಗಾಳಿಯಾಡದ ಪರಿಣಾಮ ಒಂದೇ ಕುಟುಂಬದ ಐವರು ಸದಸ್ಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಲ್ನೋಟಕ್ಕೆ ಆಮ್ಲಜನಕದ ಕೊರತೆ ಐವರ ಸಾವಿಗೆ ಕಾರಣವಾಗಿರಬಹುದು, ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಎಷ್ಟು ಹೊತ್ತಾದರೂ ಕುಟುಂಬವು ಬಾಗಿಲು ತೆರೆಯದಿದ್ದಾಗ ನೆರೆಹೊರೆಯವರಿಗೆ ಅನುಮಾನ ಬಂದು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿದಾಗ ಐವರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular