HomeLatest NewsSHOCKING: ಅವಸರದಲ್ಲಿ ರೈಲು ಹತ್ತುವಾಗಲೇ ದುರಂತ, ಕಾಲು ಜಾರಿ ರೈಲಿನಡಿ ಬಿದ್ದು ಯುವಕ ಸಾವು

SHOCKING: ಅವಸರದಲ್ಲಿ ರೈಲು ಹತ್ತುವಾಗಲೇ ದುರಂತ, ಕಾಲು ಜಾರಿ ರೈಲಿನಡಿ ಬಿದ್ದು ಯುವಕ ಸಾವು

ಬೀದರ್: ಅವಸರದಲ್ಲಿ ರೈಲು ಹತ್ತುವಾಗ ಕಾಲು ಜಾರಿ ರೈಲಿನಡಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಹುಮನಾಬಾದ್ ಪಟ್ಟಣದ ರೈಲು ನಿಲ್ದಾಣದಲ್ಲಿ ಬುಧವಾರ ನಡೆದಿದೆ.

ವಿಜಯಾನಂದ(31) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಕಲಬುರಗಿ ಬಸವನಗರ ನಿವಾಸಿಯಾಗಿರುವ ವಿಜಯಾನಂದ ತನ್ನ ಸಹೋದರನೊಂದಿಗೆ ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ ದೇವಾಲಯಕ್ಕೆ ಹೋಗಲು ಬೀದರ್ -ಕಲಬುರಗಿ ಡೆಮೋ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಹುಮನಾಬಾದ್ ನಿಲ್ದಾಣದಲ್ಲಿ ರೈಲು ನಿಂತಿದ್ದ ವೇಳೆ ವಿಜಯಾನಂದ ಕೆಳಗಿಳಿದು ನೀರು ತರಲು ಹೋಗಿದ್ದಾರೆ. ಈ ವೇಳೆ ರೈಲು ಚಲಿಸಲು ಆರಂಭಿಸುತ್ತಿದ್ದಂತೆ ಅವಸರದಲ್ಲಿ ಓಡುತ್ತಾ ರೈಲು ಹತ್ತುವಾಗ ಕಾಲು ಜಾರಿ ರೈಲಿನಡಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular