HomeLatest NewsSHOCKING: ಕುಡಿತದ ಚಟ ಬಿಡಲು ನಾಟಿ ಔಷಧ ಸೇವಿಸಿದ್ದ ಮೂವರು ಸಾವು, ಮತ್ತೊಬ್ಬರು ಗಂಭೀರ

SHOCKING: ಕುಡಿತದ ಚಟ ಬಿಡಲು ನಾಟಿ ಔಷಧ ಸೇವಿಸಿದ್ದ ಮೂವರು ಸಾವು, ಮತ್ತೊಬ್ಬರು ಗಂಭೀರ

ಕಲಬುರಗಿ: ಕುಡಿತದ ಚಟ ಬಿಡಲು ನಾಟಿ ಔಷಧ ಸೇವಿಸಿದ್ದ ಮೂವರು ಸಾವನ್ನಪ್ಪಿದ್ದಾರೆ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದೆ. ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ಲಕ್ಷ್ಮೀನರಸಿಂಹಲು(45), ಶಹಾಬಾದ ಪಟ್ಟಣದ ಗಣೇಶ್ ಬಾಬು ರಾಥೋಡ(24), ಮದಗಲ್  ಗ್ರಾಮದ ನಾಗೇಶ ಭೀಮೇಶಪ್ಪ ಗಡಗು(25) ಮೃತಪಟ್ಟವರು. ಇದೇ ನಾಟಿ ಔಷಧಿ ಸೇವಿಸಿದ ಲಕ್ಷ್ಮೀನರಸಿಂಹಲು ಅವರ ಪುತ್ರ ನಿಂಗಪ್ಪ ಸ್ಥಿತಿ ಗಂಭೀರವಾಗಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ಚಟದಿಂದ ಮುಕ್ತಿ ಹೊಂದಲು ಇವರು ನಾಟಿ ಔಷಧ ಸೇವಿಸಿದ್ದು, ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular