ಶಿವಮೊಗ್ಗ: ಹೃದಯಾಘಾತದಿಂದ ವಿದ್ಯಾರ್ಥಿ ಮೃತಪಟ್ಟ ಘಟನೆ ಶಿವಮೊಗ್ಗ ಹೊರವಲಯದ ವಾಜಪೇಯಿ ಬಡಾವಣೆ ಬಿಸಿಎಂ ಹಾಸ್ಟೆಲ್ ನಲ್ಲಿ ನಡೆದಿದೆ.
ಪೆಸಿಟ್ ಕಾಲೇಜು ಇಂಜಿನಿಯರಿಂಗ್ ವಿದ್ಯಾರ್ಥಿ ಗಣೇಶ್(21) ಮೃತಪಟ್ಟವರು. ಬಳ್ಳಾರಿ ಜಿಲ್ಲೆಯ ಅಂಬೇಡ್ಕರ್ ನಗರ ಕೆಂಚಮ್ಮನ ಗುಡಿಯ ನಾಗಭೂಷಣ್ ಅವರ ಪುತ್ರರಾಗಿರುವ ಗಣೇಶ್ ಪೆಸಿಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರು.
ವಾಜಪೇಯಿ ಬಡಾವಣೆಯ ಬಿಸಿಎಂ ಹಾಸ್ಟೆಲ್ ನಲ್ಲಿದ್ದ ಗಣೇಶ್ ಶುಕ್ರವಾರ ಬೆಳಗ್ಗೆ ಸ್ನಾನ ಮಾಡಲು ಬಾತ್ ರೂಂಗೆ ಹೋದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ನೇಹಿತರು ವಾಹನದಲ್ಲಿ ಸಮೀಪದಲ್ಲಿರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆದಾಗಲೇ ಗಣೇಶ್ ಮೃತಪಟ್ಟಿದ್ದರು. ಹೃದಯಾಘಾತದಿಂದ ಗಣೇಶ್ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

