HomeKarnatakaSHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ; ದೈಹಿಕ ಸುಖ ನೀಡದ ಚಿಕ್ಕಮ್ಮನನ್ನೇ ಕೊಂದ...

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ; ದೈಹಿಕ ಸುಖ ನೀಡದ ಚಿಕ್ಕಮ್ಮನನ್ನೇ ಕೊಂದ ಅಪ್ರಾಪ್ತ ಬಾಲಕ..!

ಮಂಗಳೂರು : ದೈಹಿಕ ಸುಖ ನೀಡಲು ಹಿಂದೇಟು ಹಾಕಿದ ಚಿಕ್ಕಮ್ಮನನ್ನೇ ಅಪ್ರಾಪ್ತ ಬಾಲಕ ಕೊಲೆ ಮಾಡಿದ ಶಾಕಿಂಗ್ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ. ಶಾಕಿಂಗ್ ವಿಚಾರ ಅಂದರೆ ಕೊಲೆ ಮಾಡಿದ ಬಾಲಕ 10 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ಏನಿದು ಘಟನೆ

ಉಪ್ಪಿನಂಗಡಿಯ ಪೆರ್ನೆ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನ ಅಕ್ಕನ ಮಗನಿಂದಲೇ ಕೊಲೆ ಆಗಿ ಹೋಗಿದ್ದಾರೆ. ಮೃತರನ್ನು ಹೇಮಾವತಿ(27) ಎಂದು ಗುರುತಿಸಲಾಗಿದೆ. ಹೇಮಾವತಿ ಅವರ ಮನೆಗೆ ಹೇಮಾವತಿ ಅಕ್ಕನ ಮಗ ( ಅಪ್ರಾಪ್ತ ಬಾಲಕ ) ಹೋಗಿದ್ದಾನೆ. ರಾತ್ರಿ ಚಿಕ್ಕಮ್ಮ ಮಲಗಿದ್ದ ವೇಳೆ ಅವರಿದ್ದಲ್ಲಿಗೆ ಹೋಗಿ ಅವರನ್ನು ಸ್ಪರ್ಶಿಸಿ ದೇಹಸುಖ ಬಯಸಿದ್ದಾನೆ . ತಕ್ಷಣ ಎಚ್ಚರಗೊಂಡ ಹೇಮಾವತಿ..ಬಾಲಕನನ್ನು ಗದರಿಸಿ ಸುಮ್ಮನೆ ಇರುವಂತೆ ಹೇಳಿದ್ದಾರೆ .

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಳೆ ಏನಾದರೂ ಈ ವಿಚಾರ ಮನೆಯವರಿಗೆ ಗೊತ್ತಾದರೆ..ಎಂದು ಭಯಪಟ್ಟ ಬಾಲಕ ಚಿಕ್ಕಮ್ಮ ಹೇಮಾವತಿ ನಿದ್ರೆಗೆ ಜಾರಿದಾಗ ಅವರ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ನಂತರ ಬಾಲಕ ಮನೆಯವರಿಗೆ ಹೃದಯಾಘಾತವಾಗಿದೆ ಎಂದು ಹೇಳಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಂತರ ಅನುಮಾನಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಬಾಲಕನ ದೇಹದಲ್ಲಿ ಪರಚಿದ ಗಾಯ ಪತ್ತೆಯಾಗಿದೆ. ನಂತರ ಬಾಲಕನನ್ನು ಬಾಯಿಬಿಡಿಸಿದಾಗ ನಡೆದ ಸತ್ಯವನ್ನು ಕಕ್ಕಿದ್ದಾನೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular