ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೆ ಹೊರೆ ಬಿದ್ದಿದೆ. ಅಕ್ಕಿ ದರ ಮತ್ತೆ ಹೆಚ್ಚಳವಾಗಿದ್ದು, ಒಂದೇ ತಿಂಗಳಲ್ಲಿ ಕೆಜಿಗೆ 13 ರೂಪಾಯಿವರೆಗೆ ಏರಿಕೆಯಾಗಿದೆ. 26 ಕೆಜಿ ಅಕ್ಕಿ ಚಿಲ್ಲದ ದರ 160 ರೂಪಾಯಿವರೆಗೂ ದುಬಾರಿಯಾಗಿದೆ.
ಮಾರುಕಟ್ಟೆಯಲ್ಲಿ ಕೇವಲ 15 ದಿನಗಳ ಹಿಂದೆ ಅಕ್ಕಿ ದರದಲ್ಲಿ ಕೆಜಿಗೆ 6 ರೂ. ಏರಿಕೆ ಆಗಿತ್ತು. ಇದೀಗ ಮತ್ತೆ ವಿವಿಧ ತಳಿಯ ಅಕ್ಕಿ ದರದಲ್ಲಿ 5 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಒಂದೇ ತಿಂಗಳ ಅವಧಿಯಲ್ಲಿ ಕೆಜಿ ಅಕ್ಕಿ ದರದಲ್ಲಿ 11 ರಿಂದ 13 ರೂಪಾಯಿವರೆಗೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಬಿದ್ದಿದೆ.
ಅಕ್ಕಿ ರಫ್ತು ನೀತಿಯಲ್ಲಿ ಆದ ಬದಲಾವಣೆಗಳು ದೇಶಿಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ. ಯುದ್ಧದ ಪರಿಣಾಮ ಇಂಧನ ಹಾಗೂ ತೈಲ ದರಗಳು ನಿರಂತರವಾಗಿ ಏರಿಕೆಯಾಗಿದ್ದು, ಸರಕು ಸಾಗಾಣೆ ವೆಚ್ಚ ದುಬಾರಿಯಾಗಿದೆ. 15 ದಿನಗಳ ಹಿಂದೆಯಷ್ಟೇ ಪ್ರತಿ ಕೆಜಿ ಅಕ್ಕಿ ದರ 6 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಇದೀಗ ಮತ್ತೆ 5 ರೂಪಾಯಿಯಷ್ಟು ಹೆಚ್ಚಳವಾಗಿದ್ದು, ವ್ಯಾಪಾರಿಗಳು ತಿಂಗಳಲ್ಲಿ 11 ರಿಂದ 13 ರೂಪಾಯಿವರೆಗೆ ದರ ಏರಿಕೆ ಮಾಡಿದ್ದಾರೆ.
ತೈಲ ದರ ನಿರಂತರ ಏರಿಕೆಯಿಂದ ಸಾಗಾಣಿ ವೆಚ್ಚ ಹೆಚ್ಚಳವಾಗಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಅಕ್ಕಿ ರಫ್ತು ನೀತಿಯಲ್ಲಿ ಬದಲಾವಣೆ, ಯುದ್ಧದ ಕಾರಣ ಅಕ್ಕಿ ದರದ ಮೇಲೆ ಪರಿಣಾಮ ಬೀರಿದೆ. ಸೋನಾಮಸೂರಿ, ರಾ ರೈಸ್, ಸ್ಟೀಮ್ ರೈಸ್ ಸೇರಿ ಎಲ್ಲಾ ರೀತಿಯ ಅಕ್ಕಿ ದರದಲ್ಲಿ ಏರಿಕೆಯಾಗಿದೆ.

