ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ದರ, ಒಂದು ಮೊಟ್ಟೆ ಬೆಲೆ 8 ರೂ.ವರೆಗೆ ಏರಿಕೆ

ದಕ್ಷಿಣ ಭಾರತದ ಪ್ರಮುಖ ಮೊಟ್ಟೆ ಉತ್ಪಾದನಾ ಕೇಂದ್ರವಾದ ನಾಮಕ್ಕಲ್‌ನಲ್ಲಿ ಮೊಟ್ಟೆಗಳ ಸಗಟು ಬೆಲೆ ಪ್ರತಿ ಮೊಟ್ಟೆಗೆ 6 ರೂ. 10 ಪೈಸೆಗೆ ತಲುಪಿದೆ. ಇದು ಮೊಟ್ಟೆಯ ಬೆಲೆಯನ್ನು ನಿಗದಿಪಡಿಸುವ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ(ಎನ್‌ಇಸಿಸಿ) ದಾಖಲಿಸಿದ ಅತ್ಯಧಿಕ ಬೆಲೆಯಾಗಿದೆ.

ಇನ್ನು ಚಿಲ್ಲರೆ ಮಾರುಕಟ್ಟೆಗಳಲ್ಲಿ ಮೊಟ್ಟೆ ದರ 7.50 ರೂ.ನಿಂದ 8 ರೂ.ಗೆ ಮಾರಾಟವಾಗುತ್ತಿದ್ದು, 10 ರೂ.ವರೆಗೂ ತಲುಪಬಹುದು ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಈ ವೇಳೆಯಲ್ಲಿ ಮೊಟ್ಟೆಯ ಬೆಲೆಗಳು ಕುಸಿಯುತ್ತಿದ್ದರೂ, ಈ ವರ್ಷ ಅವು ಪ್ರತಿ ದಿನ ಏರುಗತಿಯಲ್ಲಿ ಸಾಗಿವೆ. ಡಿಸೆಂಬರ್‌ನಲ್ಲಿ ಕ್ರಿಸ್ ಮಸ್, ಹೊಸ ವರ್ಷದ ಕೇಕ್‌ ತಯಾರಿಸುವ ಋುತು ಹೆಚ್ಚಾದಾಗ, ಬೆಲೆಗಳು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ಕೋಳಿ ಮೊಟ್ಟೆಯ ದರ ಪ್ರತಿದಿನ ಏರುತ್ತಿದ್ದು, ದಾಖಲೆ ಬೆಲೆಗೆ ಸಮೀಪಿಸಿದೆ. ಆಹಾರ ವಸ್ತು ಮೊಟ್ಟೆ ಬಡ ಜನರ ಪಾಲಿಗೆ ದುಬಾರಿಯಾಗಿದೆ. ದೈನಂದಿನ ಆಹಾರಕ್ಕೆ ಮೊಟ್ಟೆ ಬಳಸುತ್ತಿದ್ದವರು ಆತಂಕಗೊಂಡಿದ್ದಾರೆ.

ಕಳೆದ ಎರಡು ವಾರಗಳಿಂದ ಮೊಟ್ಟೆ ದರ ನಿಯಂತ್ರಣ ಇಲ್ಲದೆ ಏರಿಕೆಯಾಗುತ್ತಿದೆ. ಈ ವಾರಾಂತ್ಯ ಚಿಲ್ಲರೆ ಮೊಟ್ಟೆಯ ದರ 7.40ರಿಂದ 7.50ಕ್ಕೆ ತಲುಪಿದೆ. ಇದೇ ರೀತಿ ದರ ಏರಿಕೆಯಾದರೆ ಚಿಲ್ಲರೆ ಮೊಟ್ಟೆ ದರ ಹತ್ತು ರೂ.ಗೆ ತಲುಪಬಹುದು ಎಂಬ ಆತಂಕ ನೆಲೆ ನಿಂತಿದೆ. ಮಂಗಳೂರು ಸೇರಿ ಹಲವು ಕಡೆ ಚಿಲ್ಲರೆ ಮೊಟ್ಟೆ ಕನಿಷ್ಠ ದರ 8 ರೂ.ಗೆ ಮಾರಾಟವಾಗುತ್ತಿದೆ. ಅನಿಯಂತ್ರಿತ ದರ ಏರಿಕೆ ಮೊಟ್ಟೆಯನ್ನು ಅವಲಂಬಿಸಿದ ವ್ಯಾಪಾರ, ಉತ್ಪನ್ನಕ್ಕೂ ಹೊಡೆತ ನೀಡಿದೆ.

ಇತ್ತೀಚಿನ ಮೋಂಥಾ ಚಂಡ ಮಾರುತದ ಬಳಿಕ ದಕ್ಷಿಣ ಭಾರತದಲ್ಲಿ ಮೊಟ್ಟೆ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದು ಲಭ್ಯತೆಯ ಕೊರತೆಯೊಂದಿಗೆ ಬೆಲೆ ಏರಿಕೆಗೆ ಕಾರಣವಾಗಿದೆ. ಜತೆಗೆ ಕೋಳಿ ಫಾರಂಳಿಗೆ ಆಹಾರ ಸಮಸ್ಯೆ ಉಂಟಾಗಿದೆ. ಈ ಹಿಂದೆ ಕೋಳಿಗಳಿಗೆ ಆಹಾರವಾಗಿ ಜೋಳ ನೀಡುತ್ತಿದ್ದರು. ಆದರೆ ಜೋಳ ಲಭ್ಯತೆಯ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಅನೇಕ ಕೋಳಿ ಫಾರಂ ಮುಚ್ಚಲ್ಪಟ್ಟಿವೆ. ಇದರಿಂದಾಗಿ ಆಂಧ್ರ, ತಮಿಳುನಾಡು, ಕರ್ನಾಟಕ ರಾಜ್ಯಗಳಿಂದ ಮೊಟ್ಟೆ ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read