HomeLatest Newsಸಾಲಗಾರರಿಗೆ ಶಾಕಿಂಗ್ ನ್ಯೂಸ್: ಗೃಹ ಸಾಲದ ಬಡ್ಡಿ ದರ ಏರಿಕೆ ಮಾಡಿದ ಎಸ್‌.ಬಿ.ಐ.

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಗೃಹ ಸಾಲದ ಬಡ್ಡಿ ದರ ಏರಿಕೆ ಮಾಡಿದ ಎಸ್‌.ಬಿ.ಐ.

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಇತ್ತೀಚೆಗೆ ರೆಪೊ ದರವನ್ನು ಶೇಕಡ 5.5ಕ್ಕೆ ಇಳಿಕೆ ಮಾಡಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ದೇಶದ ಅತಿ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌,ಬಿ,ಐ,) ಹೊಸ ಗ್ರಾಹಕರಿಗೆ ಗೃಹ ಸಾಲದ ಬಡ್ಡಿ ದರಗಳನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡಿದೆ.

ಇದರಿಂದಾಗಿ ಗೃಹ ಸಾಲದ ಮೇಲಿನ ಬಡ್ಡಿ ದರ ಶೇಕಡ 8.45 ರಿಂದ ಶೇಕಡ 8.70ಕ್ಕೆ ಏರಿಕೆಯಾಗಿದೆ. ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಗೆ ಅನುಗುಣವಾಗಿ ಬಡ್ಡಿ ದರ ಏರಿಕೆಯಾಗುತ್ತದೆ. ಕ್ರೆಡಿಟ್ ಸ್ಕೋರ್ ಅತ್ಯುತ್ತಮವಾಗಿದ್ದರೆ ಅಂತಹವರಿಗೆ ವಿಧಿಸಲಾಗುವ ಬಡ್ಡಿದರ ಶೇಕಡ 7.50 ಆಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಗ್ರಾಹಕರು ಬಡ್ಡಿಯ ಹೊರೆ ಹೊರಬೇಕಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular