
ಕೋಡಿಗೆಹಳ್ಳಿಯ ಧನಲಕ್ಷ್ಮೀ ಲೇಔಟ್ ನಲ್ಲಿ ಘಟನೆ ನಡೆದಿದ್ದು, ತಂದೆ ರಮೇಶ್ ಮಗಳನ್ನು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ. 32 ವರ್ಷದ ಆಶಾ ಕೊಲೆಯಾದ ಮಗಳು.
ಮದುವೆ ಬಳಿಕ ಪತಿಯನ್ನು ಬಿಟ್ಟು ತವರು ಮನೆಯಲ್ಲಿಯೇ ಆಶಾ ಇದ್ದಳು. ಇದೇ ವಿಚಾರವಾಗಿ ಅಪ್ಪ-ಮಗಳ ಮಧ್ಯೆ ಜಗಳ ಆರಂಭವಾಗಿದೆ ಎನ್ನಲಾಗಿದೆ. ಜಗಳದ ವೇಳೆ ಕೋಪದ ಭರದಲ್ಲಿ ತಂದೆ, ಮಗಳ ತಲೆಯ ಮೇಲೆ ದೊಣ್ಣೆಯಿಂದ ಹೊಡೆದಿದ್ದಾನೆ. ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೋಡಿಗೆಹಳ್ಳಿ ಪೊಲೀಸರು ಆರೋಪಿ ರಮೇಶ್ ನನ್ನು ಬಂಧಿಸಿದ್ದಾರೆ.

