ಉಜ್ಜಯಿನಿ (ಮಧ್ಯಪ್ರದೇಶ) : ವಿವಾಹಿತ ಮಹಿಳೆಯೊಂದಿಗೆ ಓಡಿಹೋದ ವ್ಯಕ್ತಿಯನ್ನು ಗ್ರಾಮಸ್ಥರು ಥಳಿಸಿ, ಬಲವಂತವಾಗಿ ಮೂತ್ರ ಕುಡಿಯುವಂತೆ ಮಾಡಿ, ಶೂಗಳ ಹಾರದೊಂದಿಗೆ ಮೆರವಣಿಗೆ ಮಾಡಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ವ್ಯಕ್ತಿಗೆ ಮೂತ್ರ ಕುಡಿಯಲು ಒತ್ತಾಯಿಸಿದ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ತಲೆ ಮೇಲೆ ಬೂಟುಗಳನ್ನು ಇಟ್ಟು ಮೀಸೆಯನ್ನು ಬೋಳಿಸಿ ಕೆಲವು ಸ್ಥಳೀಯರು ಮೂತ್ರದ ಬಾಟಲಿಯನ್ನು ಕುಡಿಯಲು ಒತ್ತಾಯಿಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಕೆಲವು ದಿನಗಳ ಹಿಂದೆ ಈ ವ್ಯಕ್ತಿ ಇಬ್ಬರು ಮಕ್ಕಳ ತಾಯಿಯಾಗಿರುವ ವಿವಾಹಿತ ಮಹಿಳೆಯೊಂದಿಗೆ ಓಡಿಹೋಗಿದ್ದಾನೆ. ಈ ಘಟನೆ ಬೆಳಕಿಗೆ ಬಂದಾಗ, ಕುಟುಂಬ ಮತ್ತು ಗ್ರಾಮಸ್ಥರು ಇಬ್ಬರನ್ನೂ ರಾಜಸ್ಥಾನದಿಂದ ಬಂಧಿಸಿ ಮರಳಿ ಕರೆತಂದಿದ್ದಾರೆ.
ನಂತರ ಗ್ರಾಮಸ್ಥರು ಯುವಕನನ್ನು ಮರಕ್ಕೆ ಕಟ್ಟಿ ಬೂಟುಗಳ ಹಾರವನ್ನು ಧರಿಸುವಂತೆ ಒತ್ತಾಯಿಸಿ ವಿಕೃತಿ ಮೆರೆದಿದ್ದಾರೆ. ಆತನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯನ್ನು ಸಹ ಶೂಗಳಿಂದ ಥಳಿಸಲಾಯಿತು. ಇದರ ನಂತರವೂ ಗ್ರಾಮಸ್ಥರು ಕರುಣೆ ತೋರದೇ ಯುವಕನ ಅರ್ಧದಷ್ಟು ಮೀಸೆಯನ್ನು ಬೋಳಿಸಿ ಬಾಟಲಿಯಿಂದ ಮೂತ್ರವನ್ನು ಬಲವಂತವಾಗಿ ಕುಡಿಯುವಂತೆ ಒತ್ತಾಯಿಸಲಾಗಿದೆ. ಇಡೀ ಘಟನೆಯನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ನಡೆದ ಈ ಅಮಾನವೀಯ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
#WATCH | Man Forced To Drink Urine After Eloping With A Married Woman In #Ujjain#MadhyaPradesh #MPNews pic.twitter.com/tyyYKl95qW
— Free Press Madhya Pradesh (@FreePressMP) March 20, 2024

