HomeKarnatakaSHOCKING : ತಂದೆ ನೀರಿನಲ್ಲಿ ಮುಳುಗುತ್ತಿದ್ದರೆ, ಅಸಹಾಯಕನಾಗಿ ವಿಡಿಯೋ ಮಾಡುತ್ತಿದ್ದ ಮಗ! ಭೀಕರ ದೃಶ್ಯ ವೈರಲ್...

SHOCKING : ತಂದೆ ನೀರಿನಲ್ಲಿ ಮುಳುಗುತ್ತಿದ್ದರೆ, ಅಸಹಾಯಕನಾಗಿ ವಿಡಿಯೋ ಮಾಡುತ್ತಿದ್ದ ಮಗ! ಭೀಕರ ದೃಶ್ಯ ವೈರಲ್ |WATCH VIDEO

ಕಲಬುರ್ಗಿ : ಮಗನ ಕಣ್ಣೆದುರೇ ತಂದೆಯೊಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಭೀಕರ ಹಾಗೂ ಆಘಾತಕಾರಿ ಘಟನೆಯೊಂದು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದಲ್ಲಿ ವರದಿಯಾಗಿದೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದ ಬಳಿ ಹರಿಯುವ ಭೀಮಾ ನದಿಯಲ್ಲಿ ಘಟನೆ ನಡೆದಿದೆ.

ವಿಜಯ್ ರಾಜು ಎಂಬುವವರು  ತಮ್ಮ ಎಮ್ಮೆಯನ್ನು ವಾಪಸ್ ಕರೆತರುವ ಸಲುವಾಗಿ ನದಿಗೆ ಇಳಿದಿದ್ದರು.ನದಿ ದಾಟಲು ಯತ್ನಿಸಿದ ವಿಜಯ್ ರಾಜು ಅವರಿಗೆ ಈಜಲು ಬಾರದಿರುವ ಕಾರಣ, ನೀರಿನ ಸೆಳೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಮುಳುಗಲು ಪ್ರಾರಂಭಿಸಿದರು. ನದಿಯ ಮಧ್ಯಭಾಗದಿಂದ “ಕಾಪಾಡಿ, ಕಾಪಾಡಿ” ಎಂದು ಕೂಗುತ್ತಾ ಅವರು ಕೈಕಾಲು ಬಡಿಯುತ್ತಿದ್ದರೂ, ದಡದ ಮೇಲೆ ಇದ್ದ ಮಗನಿಗೆ ಏನು ಮಾಡಬೇಕೆಂದು ತೋಚದೆ ಅಸಹಾಯಕನಾಗಿ ನಿಲ್ಲಬೇಕಾಯಿತು.

ದುರದೃಷ್ಟವಶಾತ್, ತಂದೆ ಪ್ರಾಣ ಬಿಡುವ ಅಂತಿಮ ಭೀಕರ ಕ್ಷಣಗಳು ಮಗನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಗನ ಕಣ್ಣೆದುರೇ ತಂದೆ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಸಾವನ್ನಪ್ಪಿದ ಈ ದೃಶ್ಯ ನೋಡುಗರ ಎದೆ ನಡುಗಿಸುವಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಗನ ಮೊಬೈಲ್‌ನಲ್ಲಿ ಸೆರೆಯಾದ ಅಂತಿಮ ಕ್ಷಣ:

View this post on Instagram

A post shared by GUARANTEE NEWS (@guaranteenewskannada)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular