HomeLatest News'ಗ್ಯಾಸ್ ಸಿಲಿಂಡರ್‌'ನಿಂದ ಹಿಡಿದು UPI, ATM ವರೆಗೆ : ಜೂನ್ 1 ರಿಂದ ಜಾರಿಗೆ ಬಂದ...

‘ಗ್ಯಾಸ್ ಸಿಲಿಂಡರ್‌’ನಿಂದ ಹಿಡಿದು UPI, ATM ವರೆಗೆ : ಜೂನ್ 1 ರಿಂದ ಜಾರಿಗೆ ಬಂದ ಹೊಸ ನಿಯಮಗಳು |New Rules from June 1

ಇಂದಿನಿಂದ (ಜೂನ್ 1) ಎಲ್‌ಪಿಜಿ, ಯುಪಿಐ, ಎಟಿಎಂ ವಹಿವಾಟುಗಳು ಮತ್ತು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳು ಜಾರಿಗೆ ಬಂದಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ದೈನಂದಿನ ಖರ್ಚು ಮತ್ತು ಡಿಜಿಟಲ್ ವಹಿವಾಟುಗಳ ಮೇಲೆ ನೇರ ಪರಿಣಾಮ ಬೀರಲಿವೆ.

  • ಎಲ್‌ಪಿಜಿ ಸಿಲಿಂಡರ್ ನಿಯಮಗಳು: ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಸಂಪರ್ಕ ಹೊಂದಿರುವ ಮನೆಗಳಿಗೆ ಎಲ್‌ಪಿಜಿ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಹೊಸ ನಿಯಮದ ಪ್ರಕಾರ, ಪಿಎನ್‌ಜಿ ಸಂಪರ್ಕ ಸಕ್ರಿಯಗೊಂಡ 30 ದಿನಗಳೊಳಗೆ ಹಳೆಯ ಎಲ್‌ಪಿಜಿ ಸಿಲಿಂಡರ್ ಸಂಪರ್ಕವನ್ನು ಸರಂಡರ್ ಮಾಡಬೇಕು. ಆದರೆ, ಇಂಡೇನ್, ಭಾರತ್ ಮತ್ತು ಹೆಚ್‌ಪಿ ಗ್ಯಾಸ್ ಕಂಪನಿಗಳು ‘ಕನೆಕ್ಷನ್ ಟ್ರಾನ್ಸ್‌ಫರ್ ವೋಚರ್’ ವ್ಯವಸ್ಥೆಯನ್ನು ಪರಿಚಯಿಸಿದ್ದು, ಇದು ಭವಿಷ್ಯದಲ್ಲಿ ಮತ್ತೆ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ.

  • ಸಿಲಿಂಡರ್ ದರಗಳ ಪರಿಷ್ಕರಣೆ: ಪ್ರತಿ ತಿಂಗಳಿನಂತೆ ಈ ತಿಂಗಳೂ ಎಲ್‌ಪಿಜಿ ಮತ್ತು ಕಮರ್ಷಿಯಲ್ ಸಿಲಿಂಡರ್‌ಗಳ ದರ ಪರಿಷ್ಕರಣೆ ಜಾರಿಗೆ ಬಂದಿದೆ. ದೇಶದ ಹಲವು ಕಡೆಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹೈದರಾಬಾದ್‌ನಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 52 ರೂ. ಏರಿಕೆಯಾಗಿ, 3,367 ರೂ.ಗೆ ತಲುಪಿದೆ. 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್ ಬೆಲೆಯೂ 11 ರೂ. ಏರಿಕೆಯಾಗಿದೆ. ಆದಾಗ್ಯೂ, ಕೇಂದ್ರ ಸರ್ಕಾರವು ಡೊಮೆಸ್ಟಿಕ್ (ಮನೆಬಳಕೆಯ) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಯುಪಿಐ ಭದ್ರತೆ: ಡಿಜಿಟಲ್ ಭದ್ರತೆಯನ್ನು ಹೆಚ್ಚಿಸಲು ಯುಪಿಐ ವಹಿವಾಟುಗಳಲ್ಲಿ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ತರಲಾಗಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮುಂತಾದ ಆಪ್‌ಗಳಲ್ಲಿ ಹಣ ವರ್ಗಾವಣೆ ಮಾಡುವ ಮೊದಲು, ಫಲಾನುಭವಿಯ ಅಧಿಕೃತ ಬ್ಯಾಂಕ್ ಖಾತೆ ಹೆಸರು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಮೋಸದ ವಹಿವಾಟುಗಳನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

  • ಬ್ಯಾಂಕಿಂಗ್ ಮತ್ತು ಎಟಿಎಂ: ಬ್ಯಾಂಕಿಂಗ್ ಸೇವೆಗಳಲ್ಲಿಯೂ ಕೆಲವು ಬದಲಾವಣೆಗಳಾಗಿವೆ. ಎಟಿಎಂ ಉಚಿತ ವಹಿವಾಟುಗಳ ಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಮಿತಿ ಮೀರಿದರೆ ಹಣ ವಿತ್‌ಡ್ರಾ ಅಥವಾ ಬ್ಯಾಲೆನ್ಸ್ ಚೆಕ್ ಮಾಡಲು ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

  • ಆದಾಯ ತೆರಿಗೆ: ಆದಾಯ ತೆರಿಗೆ ಪಾವತಿದಾರರಿಗೆ ಜೂನ್ 15 ಪ್ರಮುಖ ದಿನಾಂಕವಾಗಿದೆ. ಈ ಆರ್ಥಿಕ ವರ್ಷದಲ್ಲಿ ತೆರಿಗೆಯನ್ನು ನಾಲ್ಕು ಕಂತುಗಳಲ್ಲಿ (ಜೂನ್ 15, ಸೆಪ್ಟೆಂಬರ್ 15, ಡಿಸೆಂಬರ್ 15 ಮತ್ತು ಮಾರ್ಚ್ 15ರ ಒಳಗೆ) ಪಾವತಿಸಬೇಕಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular