HomeCrimeಪಾಠ ಮಾಡುವ ನೆಪದಲ್ಲಿ ಅಪ್ರಾಪ್ತಳನ್ನು ಮನೆಗೆ ಕರೆಸಿಕೊಂಡ ಶಿಕ್ಷಕ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಗ್ರಾಮಸ್ಥರಿಂದ...

ಪಾಠ ಮಾಡುವ ನೆಪದಲ್ಲಿ ಅಪ್ರಾಪ್ತಳನ್ನು ಮನೆಗೆ ಕರೆಸಿಕೊಂಡ ಶಿಕ್ಷಕ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಗ್ರಾಮಸ್ಥರಿಂದ ಥಳಿತ

ಬಿಹಾರದ ಮೋತಿಹಾರಿ ಜಿಲ್ಲೆಯ ಘೋರಸಾಹನ್ ಬ್ಲಾಕ್‌ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ಶಿಕ್ಷಕ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆರೋಪಿಯನ್ನು ಆತ್ಮಮೋಹನ್‌ನ ರಾಕೇಶ್ ಕುಮಾರ್ ಎಂದು ಗುರುತಿಸಲಾಗಿದೆ.  ತನ್ನ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಹೆಚ್ಚಿನ ತರಬೇತಿ ನೀಡುವ ನೆಪದಲ್ಲಿ ಶಿಕ್ಷಕ ಹುಡುಗಿಯನ್ನು ಹೊರಗೆ ಕರೆದುಕೊಂಡು ಹೋಗ್ತಿದ್ದ ಎನ್ನಲಾಗಿದೆ. ಗ್ರಾಮಸ್ಥರು, ಶಿಕ್ಷಕ, ಹುಡುಗಿ ಜೊತೆಗಿರುವಾಗ್ಲೇ ಹಿಡಿದಿದ್ದಾರೆ. ಗ್ರಾಮಸ್ಥರು, ಬಾಗಿಲು ಮುಚ್ಚಿದ ರೂಮ್‌ ಬಾಗಿಲು ತಟ್ಟಿದ್ದಾರೆ. ಆರಂಭದಲ್ಲಿ ಶಿಕ್ಷಕ ಹೆಚ್ಚುವರಿ ತರಗತಿ ನಡೆಯುತ್ತಿದೆ ಎಂದಿದ್ದಾನೆ. ಬಾಗಿಲು ಒಡೆದು ಗ್ರಾಮಸ್ಥರು ಒಳಗೆ ನುಗ್ಗಿದಾಗ ಶಿಕ್ಷಕನ ಕೃತ್ಯ ಬಯಲಾಗಿದೆ. ಶಿಕ್ಷಕ ಹಾಗೂ ಗ್ರಾಮಸ್ಥರ ನಡುವೆ ವಾದ – ವಿವಾದ ನಡೆದಿದೆ. ಕೋಪಗೊಂಡ ಗ್ರಾಮಸ್ಥರು, ಶಿಕ್ಷಕನಿಗೆ ಥಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಸ್ಥಳೀಯ ಬ್ಲಾಕ್ ಶಿಕ್ಷಣಾಧಿಕಾರಿ ಶಿಕ್ಷಕರ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದಾರೆ.  ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿಯ ತಂದೆ ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular