HomeLatest NewsSHOCKING : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ :  ಮಹಿಳೆಗೆ 9 ಬಾರಿ ಚಾಕು ಇರಿದು...

SHOCKING : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ :  ಮಹಿಳೆಗೆ 9 ಬಾರಿ ಚಾಕು ಇರಿದು ಹತ್ಯೆಗೈದು ‘ಪಾಗಲ್ ಪ್ರೇಮಿ’ ಆತ್ಮಹತ್ಯೆ.!

ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳೀಸೋ ಘಟನೆ ನಡೆದಿದ್ದು, ಪಾಗಲ್ ಪ್ರೇಮಿಯೋರ್ವ  ಮಹಿಳೆಯನ್ನು 9 ಬಾರಿ ಇರಿದು ಕೊಂದ ಘಟನೆ ನಡೆದಿದೆ.

ಬೆಳಗಾವಿಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಈ ಕೊಲೆ & ಆತ್ಮಹತ್ಯೆ ನಡೆದಿದೆ. ಅಕ್ರಮ ಸಂಬಂಧಕ್ಕೆ ಇಬ್ಬರು ಕೂಡ ಹೆಣವಾಗಿದ್ದಾರೆ.

ಘಟನೆ ಹಿನ್ನೆಲೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೀಡಿ ಗ್ರಾಮದ ರೇಷ್ಮಾ ತಿರವಿರ (29) ಹಾಗೂ ಆನಂದ್ ಸುತಾರ್ ಪರಸ್ಪರ ಪ್ರೀತಿಸುತ್ತಿದ್ದರು.ಇಬ್ಬರಿಗೂ (ಪ್ರತ್ಯೇಕವಾಗಿ) ಮದುವೆಯಾಗಿತ್ತು. ಮದುವೆಯಾಗಿ ಇಬ್ಬರಿಗೂ ಮಕ್ಕಳಿದ್ದರು. ಇದೆಲ್ಲದರ ನಡುವೆ ಇಬ್ಬರ ಅನೈತಿಕ ಸಂಬಂಧ ಮುಂದುವರೆದಿದೆ.

ಇಬ್ಬರ ನಡುವೆ ಅನೈತಿಕ ಸಂಬಂಧವಿರುವ ವಿಷಯ ರೇಷ್ಮಾ ಪತಿಗೆ ಗೊತ್ತಾಗಿದೆ. ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ ರೇಷ್ಮಾ ಪತಿ ದೊಡ್ಡ ಗಲಾಟೆ ಮಾಡಿದ್ದನು. ಅಲ್ಲದೇ ನಂದಗಡ ಪೊಲೀಸ್ ಠಾಣೆಗೆ ಕೂಡ ದೂರು ನೀಡಿದ್ದರು.  ನಂತರ ಇಬ್ಬರಿಗೂ ಬುದ್ದಿ ಹೇಳಿ ಕಳುಹಿಸಲಾಗಿತ್ತು.

ಪೊಲೀಸರು ವಾರ್ನ್ ಮಾಡಿದ ಬಳಿಕ ರೇಷ್ಮಾ ಆನಂದ್ ನಿಂದ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಹುಚ್ಚನಂತಾಗಿದ್ದ ಆನಂದ್ ಭೇಟಿ ಮಾಡುವ ನೆಪದಲ್ಲಿ ರೇಷ್ಮಾ ಮನೆಗೆ ಹೋಗಿದ್ದಾನೆ. ಭೇಟಿ ಮಾಡುವ ನೆಪದಲ್ಲಿ ರೇಷ್ಮಾಳನ್ನು ಕರೆಸಿ ಚಾಕು ಇರಿದಿದ್ದಾನೆ. ಸತತ 9 ಬಾರಿ ಚಾಕು ಇರಿದು ತಾನೂ ಕೂಡ ಚಾಕು ಇರಿದುಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಷ್ಮಾ ಸ್ಥಳದಲ್ಲೇ ಮೃತಪಟ್ಟರೆ, ಅದೇ ಚಾಕುವಿನಿಂದ ಚುಚ್ಚಿಕೊಂಡಿದ್ದ ಆನಂದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಂದಗಡ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular