ಘಾಜಿಪುರ : ಉತ್ತರ ಪ್ರದೇಶದ ಗಾಜಿಪುರದಲ್ಲಿ ಪ್ರಯಾಣಿಕರಿದ್ದ ಬಸ್ ಗೆ 11,000 ವೋಲ್ಟ್ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 10 ಜನರು ಸಜೀವ ದಹನವಾಗಿದ್ದಾರೆ.
ಬಸ್ ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು, ಕನಿಷ್ಠ 10 ಜನರು ಸಜೀವ ದಹನವಾಗಿದ್ದಾರೆ. ಉಳಿದ 20 ಮಂದಿ ಬಸ್ ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ದಾರುಣ ಘಟನೆಯ ವಿಡಿಯೋ ವೈರಲ್ ಆಗಿದೆ.
ಮರ್ದಾ ಪೊಲೀಸ್ ಠಾಣೆ ಪ್ರದೇಶದ ಬಳಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮದುವೆಗೆ ತೆರಳುತ್ತಿದ್ದ ಜನರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಹೈಟೆನ್ಷನ್ ತಂತಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬಸ್ ಮೌನಿಂದ ಮದುವೆ ಸಮಾರಂಭಕ್ಕೆ ಹೋಗುತ್ತಿತ್ತು. ದುರಂತದ ಹಲವಾರು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ.
गाजीपुर में बस में करेंट उतरने से कई लोगो की मौत की खबर,CNG बस कोपागंज से बारात लेकर गाजीपुर के मरदह के महाहर आ रही थी। 20 से ज्यादा लोग सवार थे इसमें pic.twitter.com/oTxvfRELgr
— आदित्य तिवारी / Aditya Tiwari (@aditytiwarilive) March 11, 2024
धूं-धूं कर जलती इस बस में 30 से ज्यादा इंसान ज़िंदा जलकर मर गए। यह हादसा गाज़ीपुर के मरदह थाना क्षेत्र के महाहर जाने वाले रोड पर हुआ। बारात लेकर जा रही बस पर 11 हजार बिजली के तार गिरने से बस में आग लग गई। लापरवाही से होतीं इन मौतों के लिये कौन ज़िम्मेदार?pic.twitter.com/fJw38g6gsN
— Wasim Akram Tyagi (@WasimAkramTyagi) March 11, 2024

