ಬೆಂಗಳೂರು : ಬೆಂಗಳೂರು ಹೊರವಲಯದ ನೆಲಮಂಗಲದ ವಾಜರಹಳ್ಳಿಯಲ್ಲಿ 28 ವರ್ಷದ ಜಿಮ್ ಟ್ರೈನರ್ ದಿಲೀಪ್ ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 42 ವರ್ಷದ ವಿವಾಹಿತ ಮಹಿಳೆಯೊಬ್ಬಳ ಜೊತೆಗಿನ ಸಂಬಂಧ ಮತ್ತು ಆಕೆ ನಡೆಸುತ್ತಿದ್ದ ಎನ್ನಲಾದ ಹಣ ಹಾಗೂ ಆಸ್ತಿಗಾಗಿನ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲದ ವಾಜರಹಳ್ಳಿಯಲ್ಲಿ ದಿಲೀಪ್ (28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 42 ವರ್ಷದ ವಿವಾಹಿತ ಮಹಿಳೆಯೊಬ್ಬಳ ಜೊತೆಗಿನ ಸಂಬಂಧ ಮತ್ತು ಆಕೆ ನಡೆಸುತ್ತಿದ್ದ ಎನ್ನಲಾದ ಹಣ ಹಾಗೂ ಆಸ್ತಿಗಾಗಿನ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. : ದಿಲೀಪ್ ಹೆಸರಿನಲ್ಲಿದ್ದ ಮನೆಯನ್ನು ತನ್ನ ಮಗನ ಹೆಸರಿಗೆ ಬರೆದುಕೊಡುವಂತೆ ಯೋಗಿತಾ ಕಿರುಕುಳ ನೀಡುತ್ತಿದ್ದಳು ಎಂದು ದಿಲೀಪ್ ತಂದೆ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ವಿಡಿಯೋ ಕಾಲ್ ಆತ್ಮಹತ್ಯೆ : ದಿಲೀಪ್ ನೇಣಿಗೆ ಶರಣಾಗುವ ಮುನ್ನ ಯೋಗಿತಾಗೆ ವಿಡಿಯೋ ಕಾಲ್ ಮಾಡಿ ತನ್ನ ನಿರ್ಧಾರವನ್ನು ತಿಳಿಸಿದ್ದರು ಎನ್ನಲಾಗಿದೆ. ಇದನ್ನು ಕಂಡು ಗಾಬರಿಗೊಂಡ ಯೋಗಿತಾ, ದಿಲೀಪ್ ಸಹೋದರಿಗೆ ಇನ್‌ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾಳೆ. ಒಂದು ವರ್ಷದ ಹಿಂದೆಯೇ ಈ ಇಬ್ಬರ ಸಂಬಂಧದ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆಗ ಸಂಧಾನದ ಮೂಲಕ ಪ್ರಕರಣ ಸುಖಾಂತ್ಯಗೊಂಡಿದ್ದರೂ, ಮಹಿಳೆಯ ಕಿರುಕುಳ ಮುಂದುವರಿದಿತ್ತು ಎಂಬ ದೂರು ಕೇಳಿಬಂದಿದೆ.
ಈ ಹಿಂದೆ ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಸಂಧಾನ ನಡೆದು, ಮಹಿಳೆಯ ಪತಿಯ ಸಮ್ಮುಖದಲ್ಲೇ ಬಗೆಹರಿಸಲಾಗಿತ್ತು. ಆದರೂ ಕಿರುಕುಳ ಮುಂದುವರಿದಿತ್ತು ಎನ್ನಲಾಗಿದೆ. ದಿಲೀಪ್ ಸಾವನ್ನಪ್ಪಿದ ವಿಷಯವನ್ನು ಅದೇ ಮಹಿಳೆ ಇನ್‌ಸ್ಟಾಗ್ರಾಮ್ ಮೂಲಕ ದಿಲೀಪ್ ಸಹೋದರನಿಗೆ ತಿಳಿಸಿದ್ದಾಳೆ. ಬಾಗಿಲು ಮುರಿದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಸ್ತುತ ನೆಲಮಂಗಲ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

