HomeInternationalSHOCKING : ಕಾಂಗೋದಲ್ಲಿ 'ಬೋಟ್' ಮುಳುಗಿ 78 ಮಂದಿ ಜಲಸಮಾಧಿ, ಹಲವರು ನಾಪತ್ತೆ |VIDEO

SHOCKING : ಕಾಂಗೋದಲ್ಲಿ ‘ಬೋಟ್’ ಮುಳುಗಿ 78 ಮಂದಿ ಜಲಸಮಾಧಿ, ಹಲವರು ನಾಪತ್ತೆ |VIDEO

ಕಾಂಗೋದಲ್ಲಿ ಬೋಟ್ ಮುಳುಗಿ 78 ಮಂದಿ ಜಲಸಮಾಧಿಯಾಗಿದ್ದಾರೆ. ಘಟನೆಯ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.

ದಕ್ಷಿಣ ಕಿವು ಪ್ರಾಂತ್ಯದ ಮಿನೋವಾ ಪಟ್ಟಣದಿಂದ ಗೋಮಾ ಪಟ್ಟಣಕ್ಕೆ 278 ಪ್ರಯಾಣಿಕರನ್ನು ಹೊತ್ತ ಬೋಟ್ ಓವರ್ಲೋಡ್ನಿಂದಾಗಿ ಗೋಮಾ ಕರಾವಳಿಯಿಂದ ಕೇವಲ 100 ಮೀಟರ್ ದೂರದಲ್ಲಿ ಪಲ್ಟಿಯಾಗಿದೆ. ಕಿವು ಸರೋವರದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 78 ಜನರು ಪ್ರಾಣ ಕಳೆದುಕೊಂಡಿದ್ದಾರೆ . ಉಳಿದ 200 ಜನರನ್ನು ರಕ್ಷಣಾ ತಂಡಗಳು ರಕ್ಷಿಸಿವೆ.

ಅಪಘಾತದಲ್ಲಿ ಕನಿಷ್ಠ 78 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದವರಲ್ಲಿ ಕೆಲವರು ದಡಕ್ಕೆ ಈಜಿದರೆ, ಕೆಲವರನ್ನು ಭದ್ರತಾ ಪಡೆಗಳು ರಕ್ಷಿಸಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್ ಜಾಕ್ವೆಸ್ ಪುರುಷಿ ಸುದ್ದಿಗಾರರಿಗೆ ತಿಳಿಸಿದರು. ಸಾವಿನ ನಿಖರ ಸಂಖ್ಯೆಯನ್ನು ಕಂಡುಹಿಡಿಯಲು ಇನ್ನೂ ಎರಡು ದಿನಗಳು ಬೇಕಾಗುತ್ತದೆ. ಏಕೆಂದರೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ಕಾಣೆಯಾದ ಎಲ್ಲಾ 78 ಜನರ ಶವಗಳು ಪತ್ತೆಯಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular