HomeBusinessSHOCKING: ಡಾರ್ಕ್ ವೆಬ್‌ನಲ್ಲಿ 6 ಲಕ್ಷ HDFC ಗ್ರಾಹಕರ ಡೇಟಾ ಸೋರಿಕೆ.....! ಈ ಕುರಿತು ಬ್ಯಾಂಕ್‌ನಿಂದ್ಲೇ...

SHOCKING: ಡಾರ್ಕ್ ವೆಬ್‌ನಲ್ಲಿ 6 ಲಕ್ಷ HDFC ಗ್ರಾಹಕರ ಡೇಟಾ ಸೋರಿಕೆ…..! ಈ ಕುರಿತು ಬ್ಯಾಂಕ್‌ನಿಂದ್ಲೇ ಸ್ಪಷ್ಟನೆ

ಭಾರತದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕಳೆದ ಕೆಲ ದಿನಗಳಿಂದ ಎಸ್ ಎಂ ಎಸ್ ಮೂಲಕ ಹಣ ಪಡೆದು ಪಂಗನಾಮ ಹಾಕಿರುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಈ ಮಧ್ಯೆ 6 ಲಕ್ಷ HDFC ಗ್ರಾಹಕರ ಡೇಟಾ, ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ವರದಿಯ ಪ್ರಕಾರ ಹ್ಯಾಕರ್‌ಗಳು ‘ಜನಪ್ರಿಯ ಸೈಬರ್ ಕ್ರಿಮಿನಲ್ ಫೋರಂ’ನಲ್ಲಿ 6 ಲಕ್ಷ ಜನರ ವೈಯಕ್ತಿಕ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಲ್ಲಿ ಹೆಸರುಗಳು, ಇಮೇಲ್ ವಿಳಾಸ, ಅಡ್ರೆಸ್‌ ಮತ್ತು ಸೂಕ್ಷ್ಮ ಹಣಕಾಸು ಡೇಟಾ ಸೇರಿವೆ ಎಂದು ವರದಿ ಹೇಳಿದೆ. ಹ್ಯಾಕರ್‌ಗಳು ಬ್ಯಾಂಕ್‌ನ ನಕಲಿ ಟ್ವಿಟರ್ ಖಾತೆಯನ್ನು ರಚಿಸಿದ್ದಾರೆ ಮತ್ತು ಬಳಕೆದಾರರ ದೂರುಗಳಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ಕೂಡ ಹೇಳಲಾಗಿದೆ. ಈ ಬಗ್ಗೆ ಖುದ್ದು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಪ್ರತಿಕ್ರಿಯೆ ಕೂಡ ಲಭ್ಯವಾಗಿದೆ. ಆದರೆ ಬ್ಯಾಂಕ್‌ ಹೇಳುವ ಪ್ರಕಾರ ಗ್ರಾಹಕರ ಡೇಟಾ ಸೋರಿಕೆಯಾಗಿಲ್ಲ. ಎಚ್‌ಡಿಎಫ್‌ಸಿ ಬ್ಯಾಂಕ್ ಈ ಸಂಬಂಧ ಟ್ವೀಟ್‌ ಕೂಡ ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಯಾವುದೇ ಡೇಟಾ ಸೋರಿಕೆಯಾಗಿಲ್ಲ, ಹ್ಯಾಕರ್‌ಗಳು ನಮ್ಮ ಸಿಸ್ಟಮ್‌ ಅನ್ನು ಪ್ರವೇಶಿಸಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕರ ಡೇಟಾ ಸುರಕ್ಷತೆ ಅತ್ಯಂತ ಗಂಭೀರವಾದ ವಿಷಯ, ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ವ್ಯವಸ್ಥೆಗಳ ಬಗ್ಗೆ ಮೇಲ್ವಿಚಾರಣೆ ಮುಂದುವರಿಸುವುದಾಗಿ ಬ್ಯಾಂಕ್‌ ಸ್ಪಷ್ಟಪಡಿಸಿದೆ. ಕಳೆದ ಹಲವು ದಿನಗಳಿಂದ ವಂಚನೆ ನಡೆಯುತ್ತಿರುವ ಬಗ್ಗೆ ಅನೇಕ ಎಚ್‌ಡಿಎಫ್‌ಸಿ ಬ್ಯಾಂಕ್‌ ಬಳಕೆದಾರರು ದೂರು ನೀಡಿದ್ದಾರೆ. ಹಾಗಾಗಿ ಬ್ಯಾಂಕ್ ಈ ದೂರುಗಳಿಗೆ Twitter ನಲ್ಲಿ ಪ್ರತಿಕ್ರಿಯಿಸಿದೆ.

PAN ಕಾರ್ಡ್, KYC ಅಪ್‌ಡೇಟ್ ಅಥವಾ ಯಾವುದೇ ಇತರ ಬ್ಯಾಂಕಿಂಗ್ ಮಾಹಿತಿಯನ್ನು ಕೇಳುವ ಅಪರಿಚಿತ ಸಂಖ್ಯೆಗಳಿಗೆ ಪ್ರತಿಕ್ರಿಯಿಸದಂತೆ ಸೂಚಿಸಿದೆ. ಬ್ಯಾಂಕ್ ಎಂದಿಗೂ ಪ್ಯಾನ್ ವಿವರಗಳು, OTP, UPI VPA / MPIN, ಗ್ರಾಹಕ ID ಮತ್ತು ಪಾಸ್‌ವರ್ಡ್, ಕಾರ್ಡ್ ಸಂಖ್ಯೆ, ATM ಪಿನ್ ಮತ್ತು CVV ಅನ್ನು ಕೇಳುವುದಿಲ್ಲ. ಹಾಗಾಗಿ ಗೌಪ್ಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಬ್ಯಾಂಕ್‌ ಮನವಿ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular