HomeLatest Newsಸಾಲಗಾರರಿಗೆ ಶಾಕ್: ಚಿನ್ನಾಭರಣ ಸಾಲ ವಾಯಿದೆ ಮುಗಿದ ಬಳಿಕ ಅಸಲು ಪಾವತಿ ಕಡ್ಡಾಯ

ಸಾಲಗಾರರಿಗೆ ಶಾಕ್: ಚಿನ್ನಾಭರಣ ಸಾಲ ವಾಯಿದೆ ಮುಗಿದ ಬಳಿಕ ಅಸಲು ಪಾವತಿ ಕಡ್ಡಾಯ

ಚಿನ್ನಾಭರಣ ಸಾಲದ ನಿಯಮ ಈಗ ಹೊರೆಯಾಗಿ ಪರಿಣಮಿಸಿದೆ. ವಾಯಿದೆ ಮುಕ್ತಾಯದ ನಂತರ ಅಸಲು ಪಾವತಿ ಕಡ್ಡಾಯ ಮಾಡಲಾಗಿದೆ.

ಬ್ಯಾಂಕುಗಳಲ್ಲಿ ಪಡೆದುಕೊಳ್ಳುವ ಚಿನ್ನಾಭರಣ ಸಾಲವನ್ನು ನಿಗದಿತ ಅವಧಿಯ ಕೊನೆಗೆ ಬಡ್ಡಿ ಮಾತ್ರ ಪಾವತಿಸಿ ಗ್ರಾಹಕರು ನವೀಕರಿಸುತ್ತಿದ್ದರು. ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಹೊರಡಿಸಿದ ಸುತ್ತೋಲೆ ಸಾಲಗಾರರಿಗೆ ಹೊರೆಯಾಗಿ ಪರಿಣಮಿಸಿದೆ. ಬಡ್ಡಿಯನ್ನಷ್ಟೇ ಪಾವತಿಸಿ ಸಾಲ ನವೀಕರಿಸುವಂತಿಲ್ಲ ಎಂದು ಆರ್.ಬಿ.ಐ. ಬ್ಯಾಂಕುಗಳಿಗೆ ತಾಕೀತು ಮಾಡಿದೆ. ಸಾಲ ಪಡೆದವರು ಬಡ್ಡಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಸಾಲದ ಅಸಲು ಪಾವತಿಸಬೇಕು. ನಂತರ ಹೊಸ ಅರ್ಜಿ ಸಲ್ಲಿಸಿ ಮತ್ತೆ ಸಾಲ ಪಡೆಯಬಹುದು ಎಂದು ಹೇಳಲಾಗಿದೆ.

ಈ ಮೊದಲಿನಿಂದಲೂ ವಾಯಿದೆ ಮುಗಿದ ನಂತರ ಅಸಲು, ಬಡ್ಡಿ ಪೂರ್ಣ ಪಾವತಿಸಬೇಕು ಎಂಬ ನಿಯಮವಿದೆ. ಆದರೆ ಕೆಲವು ಬ್ಯಾಂಕ್ ಅಧಿಕಾರಿಗಳು ಕೇವಲ ಬಡ್ಡಿ ಕಟ್ಟಿಸಿಕೊಂಡು ಸಾಲ ನವೀಕರಿಸುತ್ತಿದ್ದರು. ಸಾಲ ನೀಡಿಕೆ ಪಾರದರ್ಶಕ, ವ್ಯವಸ್ಥಿತವಾಗಿರಲಿ ಎನ್ನುವ ಕಾರಣಕ್ಕೆ ಆರ್ಬಿಐ ಸುತ್ತೋಲೆ ಹೊರಡಿಸಿದ್ದು, ಅದನ್ನು ಬ್ಯಾಂಕುಗಳು ಪಾಲಿಸುವುದು ಅನಿವಾರ್ಯ ಎನ್ನುವಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನೇಕರು ತಮ್ಮಲ್ಲಿನ ಚಿನ್ನ ಒತ್ತೆ ಇಟ್ಟು ಸಾಲ ಪಡೆದಿರುತ್ತಾರೆ. ಅಸಲು ಹೊಂದಿಸುವವರೆಗೆ ಬಡ್ಡಿ ಪಾವತಿಸಿ ಸಾಲ ನವೀಕರಿಸಿಕೊಳ್ಳುತ್ತಾರೆ. ಖಾಸಗಿ ಲೇವಾದೇವಿದಾರರು ಮತ್ತು ಹಣಕಾಸು ಸಂಸ್ಥೆಗಳ ದುಬಾರಿ ಬಡ್ಡಿಗೆ ಹೋಲಿಸಿದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ದರ ಕಡಿಮೆ ಇರುತ್ತದೆ. ಹೀಗಾಗಿ ಚಿನ್ನಾಭರಣ ಒತ್ತೆ ಇಟ್ಟು ಸಾಲ ಪಡೆದುಕೊಳ್ಳುತ್ತಾರೆ. ಆದರೆ ವಾಯಿದೆ ಮುಗಿದ ನಂತರ ಸಾಲ ಪಡೆದವರು ಬಡ್ಡಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಸಾಲದ ಮೊತ್ತವನ್ನು ಮರುಪಾವತಿಸಬೇಕೆನ್ನುವ ನಿಯಮದಿಂದ ಸಾಲಗಾರರಿಗೆ ತೊಂದರೆಯಾಗಿ ಪರಿಣಮಿಸಿದೆ.

3 ಲಕ್ಷ ಸಾಲ ಪಡೆದವರು ಶೇ. 9ರ ಬಡ್ಡಿಯಂತೆ ವಾರ್ಷಿಕ 27,000 ರೂ. ಬಡ್ಡಿ ಪಾವತಿಸಿ ಸಾಲ ನವೀಕರಿಸಿಕೊಳ್ಳಬಹುದಿತ್ತು. ಆದರೆ ಈಗ ಬ್ಯಾಂಕಿನವರು ಬಡ್ಡಿ ಮಾತ್ರ ಕಟ್ಟಿಸಿಕೊಳ್ಳಲು ನಿರಾಕರಿಸಿ ಅಸಲನ್ನು ಕೂಡ ಪಾವತಿಸುವಂತೆ ಹೇಳಿರುವುದರಿಂದ ಅನಿವಾರ್ಯವಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದು ಬ್ಯಾಂಕಿಗೆ ಕಟ್ಟಿ ಪುನಃ ಬ್ಯಾಂಕಿನಿಂದ ಹೊಸ ಸಾಲ ಪಡೆದು ತಿಂಗಳ ದುಬಾರಿ ಬಡ್ಡಿಗೆ ಸಾಲ ಕೊಟ್ಟವರಿಗೆ ತೀರಿಸಬೇಕಿದೆ. ಇದು ರೈತರು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular