HomeKarnatakaBIG NEWS: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮುಂದುವರೆದ ಗೋ ಬ್ಯಾಕ್ ಅಭಿಯಾನ; 'ಕರಿಮಣಿ' ಸಾಂಗ್...

BIG NEWS: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮುಂದುವರೆದ ಗೋ ಬ್ಯಾಕ್ ಅಭಿಯಾನ; ‘ಕರಿಮಣಿ’ ಸಾಂಗ್ ರಿಮೇಕ್ ಮಾಡಿ ವ್ಯಂಗ್ಯ

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚಿಕ್ಕಮಗಳೂರು ಭಾಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೆಲ ಕಾರ್ಯಕರ್ತರು ಕಿಡಿಕಾರಿದ್ದು, ಸ್ವಕ್ಷೇತ್ರದಲ್ಲಿಯೇ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅನುದಾನವನ್ನೂ ತಂದಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಶೋಭಾ ಕರಂದ್ಲಾಜೆ ವಿರುದ್ಧ ಸಹಿಸಂಗ್ರಹ, ಗೋ ಬ್ಯಾಕ್ ಅಭಿಯಾನ ಬಳಿಕ ಇದೀಗ ಮತ್ತೊಂದು ಚಳುವಳಿ ಆರಂಭವಾಗಿದ್ದು, ‘ಕರಿಮಣಿ’ ಸಾಂಗ್ ರಿಮೇಕ್ ಮಾಡಿ ಟೀಕಿಸಲಾಗುತ್ತಿದೆ.

ಕ್ಷೇತ್ರದದೊಳಗೆ ಖಾಲಿ ಖಾಲಿ ಅನುದಾನ ತರದೆ ಹೋದ್ರೂ ನೀ ಕ್ಷೇತ್ರಕ್ಕೆ ಅಕ್ಕ… ಓ ಅಕ್ಕ, ನೀ ಅಕ್ಕ ನಮ್ಮ ಕ್ಷೇತ್ರದ ಎಂಪಿ ಶೋಭಕ್ಕ… ಎಂಬ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಭಿಯಾನ ನಡೆಸಲಾಗುತ್ತಿದೆ. ಅಲ್ಲದೇ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಿದರೆ 1 ಲಕ್ಷ ಕೋಟಾ ನೋಟು ಹಾಕುವುದಾಗಿ ಬಿಜೆಪಿ ಕಾರ್ಯಕರ್ತರೇ ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular