HomeKarnatakaBREAKING: ಹಣಕಾಸಿನ ವಿಚಾರವಾಗಿ ಗಲಾಟೆ: ಕೆಫೆ ಮಾಲೀಕನಿಂದಲೇ ಕಾರ್ಮಿಕನ ಬರ್ಬರ ಹತ್ಯೆ

BREAKING: ಹಣಕಾಸಿನ ವಿಚಾರವಾಗಿ ಗಲಾಟೆ: ಕೆಫೆ ಮಾಲೀಕನಿಂದಲೇ ಕಾರ್ಮಿಕನ ಬರ್ಬರ ಹತ್ಯೆ

ಶಿವಮೊಗ್ಗ: ಹಣಕಾಸು ವಿಚಾರವಾಗಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕೆಫೆ ಮಾಲೀಕನೇ ಕರಮಿಕನನ್ನು ಬರ್ಬರವಾಗಿ ಹತ್ಯೆಗೈರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆ ಸಿಬ್ಬಂದಿ ಬಿಹಾರ ಮೂಲದ ಟಿಂಕು ಶರ್ಮಾ (30) ಕೊಲೆಯಾದ ವ್ಯಕ್ತಿ. ಟಿಂಕು ಶರ್ಮಾ ಅವರ ಮೃತ ದೇಹ ಹೊಂಡಾ ಸಿಟಿ ಕಾರಿನಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರುಗೆ ಕೆಫೆ ಮಾಲೀಕನೇ ಕಾರ್ಮಿಕನನ್ನು ಹತ್ಯೆ ಮಾಡಿರುವ ಅಂಶ ಬಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಫೆ ಮಾಲೀಕ ಇಮ್ರಾನ್ ಹಾಗೂ ಟಿಂಕು ಶರ್ಮಾ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆಯಾಗಿತ್ತು. ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಇಮ್ರಾನ್ ಟಿಂಕು ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಕಾರಿನಲ್ಲಿ ಟಿಂಕು ಶರ್ಮಾ ಶವವಾಗಿ ಪತ್ತೆಯಾಗಿದ್ದಾನೆ. ಪ್ರಕರಣ ಸಂಬಂಧ ಕೆಫೆ ಮಾಲೀಕ ಇಮ್ರಾನ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular