ಬೆಂಗಳೂರು: ಪಶ್ಚಿಮ ಬಂಗಾಳದ ಕಲ್ಲಿದ್ದಲು ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ಹೈದರಾಬಾದ್ ಬಳಿಕ ಇದೀಗ ಜಾರಿ ನಿರ್ದೇಶನಾಲಯ-ಇಡಿ ಬೆಂಗಳೂರಿನ ಐಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿದೆ.
ಐಪ್ಯಾಕ್ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ರಿಷಿ ರಾಜ್ ಸಿಂಗ್ ಅವರಿಗೆ ಸಂಬಂಧಿಸಿದ ಕೆಲವು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಅವರ ಬೆಂಗಳೂರು ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಇದಕ್ಕೂ ಮೊದಲು ಈ ಪ್ರಕರನ ಸಂಬಂಧ ಇಡಿ ಅಧಿಕಾರಿಗಳು ಜನವರಿಯಲ್ಲಿ ಐಪ್ಯಾಕ್ ಕಚೇರಿ ಹಾಗೂ ಸಂಸ್ಥಾಪಕ, ನಿರ್ದೇಶಕ ಪ್ರತೀಕ್ ಗಾಂಧಿ ಅವರ ಕೊಲ್ಕತ್ತಾ ನಿವಾಸ ಸೇರಿದಂತೆ ಹಲವು ಕಡೆ ದಾಳಿ ನಡೆಸಿತ್ತು. ಇದೀಗ ಬೆಂಗಳೂರಿನ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

