ಶಿವಮೊಗ್ಗ: ಮಗಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಅಳಿಯನ ಕಾಟಕ್ಕೆ ಬೇಸತ್ತ ಮಾವ, ಅಳಿಯನನ್ನು ರಾಡ್ ನಿಂದ ಹೊಡೆದು ಕೊಲೆಗೈದಿರುವ ಘಟನೆ ಶಿವಮೊಗ್ಗದ ವಿನೋಬಾನಗರದಲ್ಲಿ ನಡೆದಿದೆ.
ಇಲ್ಲಿನ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಶ್ರೀನಿಧಿ ವೈನ್ ಶಾಪ್ ಮುಂದೆ ಈ ಘಟನೆ ನಡೆದಿದೆ. ಅರುಣ ಎಂಬಾತ ವೈನ್ ಶಾಪ್ ಮುಂದೆ ನಿಂತಿದ್ದ ವೇಳೆ ಏಕಾಏಕಿ ಎಂಟ್ರಿಕೊಟ್ಟ ಇಬ್ಬರು, ಅರುಣ್ ಮೇಲೆ ರಾಡ್ ನಿಂದ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅರುಣ್ ಗೆ ಹೆಣ್ನುಕೊಟ್ಟಿದ್ದ ಮಾವ ತಿಪ್ಪೇಶ್ ನೇ ತನ್ನ ಅಳಿಯನನ್ನು ಬರ್ಬರವಗೈ ಕೊಲೆ ಮಾಡಿದ್ದಾನೆ. ತಿಪ್ಪೇಶ್ ಹಾಗೂ ಲೋಕೇಶ್ ಎಂಬುವವರು ಈ ಕೃತ್ಯವೆಸಗಿದ್ದಾರೆ. ಅರುಣ್ ತಿಪ್ಪೇಶ್ ಮಗಳು ಯಶಸ್ವಿನಿಯನ್ನು ಪ್ರೀತಿಸಿ ವಿವಾಹವಾಗಿದ್ದ. ದಂಪತಿಗೆ ಒಂದು ಮಗುಕೂಡ ಇದೆ. ಆದರೆ ಪತ್ನಿಗೆ ಅರುಣ್ ಕಿರುಕುಳ ನೀಡಿ ಹಿಂಸಿಸುತ್ತಿದ್ದ. ಪದೇ ಪದೇ ಜಗಳ ಮಾಡುತ್ತಿದ್ದ. ಪತಿಯ ಕಾಟಕ್ಕೆ ನೊಂದ ಪತ್ನಿ ಕೆಲ ತಿಂಗಳಿಂದ ತವರುಮನೆ ಸೇರಿದ್ದಳು.
ಗಾಂಜಾ ಸೇವನೆ, ಗುಡಿದು ಬಂದು ಪತ್ನಿ ಮೇಲೆ ಹಲ್ಲೆ ನಡೆಸುವುದು ಮಾಡುತ್ತಿದ್ದ. ಪತಿಯ ದೌರ್ಜನ್ಯ ತಾಳಲಾರದೇ ಮಗುವಿನಿಒಂದಿಗೆ ಯಶಸ್ವಿನಿ ತವರಿಗೆ ಹೋಗಿದ್ದಳು. ಸಾಲದ್ದಕ್ಕೆ ನಿಮ್ಮ ಇಡೀ ಕುಟುಂಬವನ್ನ್ರೇ ಟಾರ್ಗೆಟ್ ಮಾಡಿ ಮುಗಿಸುವುದಾಗಿ ಅರುಣ್ ಬೆದರಿಕೆ ಬೇರೆ ಹಾಕಿದ್ದ. ಅಳಿಯನ ಅಟ್ಟಹಾಸಕ್ಕೆ ಬೇಸತ್ತ ಮಾವ, ಇದಕ್ಕೆ ಅಂತ್ಯಹಾಡಲು ಪ್ಲಾನ್ ಮಾಡಿದ್ದಾನೆ. ತಿಪ್ಪೇಶ್ ತನ್ನ ಭಾವನ ಲೋಕೇಶ್ ಜೊತೆ ಸೇರಿ ಅಳಿಯ ಅರುಣ್ ಮೇಲೆ ದಾಳಿ ನಡೆಸಿ ರಾಡ್ ನಿಂದ ಹೊಡೆದು ಹತ್ಯೆಗೈದಿದ್ದಾನೆ. ಸದ್ಯ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

