HomeKarnatakaBREAKING NEWS: ಶಾಸಕನ ಮಗನ ಹತ್ಯೆಗೆ ಜೈಲಿನಿಂದಲೇ ಸ್ಕೆಚ್? ಹಂತಕರ ಸಂಚು ಬಯಲು

BREAKING NEWS: ಶಾಸಕನ ಮಗನ ಹತ್ಯೆಗೆ ಜೈಲಿನಿಂದಲೇ ಸ್ಕೆಚ್? ಹಂತಕರ ಸಂಚು ಬಯಲು

ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಸವಣ್ಣ ಅವರ ಹತ್ಯೆಗೆ ಹಂತಕರು ರೂಪಿಸಿದ್ದ ಸಂಚು ಬಯಲಾಗಿದೆ.

ಬಸವಣ್ಣ ಹತ್ಯೆಗೆ ಹಂತಕರು ಜೈಲಿನಿಂದಲೇ ಸಂಚು ರೂಪಿಸಿದ್ದರು ಎಂಬ ಬಗ್ಗೆ ಪೊಲೀಸರ ಎಫ್ಐಆರ್ ನಲ್ಲಿ ದಾಖಲಾಗಿದೆ. ಶಾಸಕರ ಆಪ್ತರೊಬ್ಬರು ನೀಡಿರುವ ದೂರಿನ ಮೇರೆಗೆ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಟ್ ಪಟ್ ನಗರದ ನಿವಾಸಿ ಮುಬಾರಕ್ ಮುಬ್ಬು ಎಂಬಾತ ಕಳೆದ 17ನೇ ತಾರಿಕಿನಂದು ವ್ಯಕ್ತಿಯೋರ್ವನ ಬಳಿ ಬಂದು ಬಸವಣ್ಣ ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಬಳಿಕ ಡಿಚ್ಚಿ ಮುಬಾರಕ್ ಜೈಲಿನಿಂದ ಎರಡು ಪ್ರತ್ಯೇಕ ಫೋನ್ ನಂಬರ್ ನಿಂದ ಕರೆ ಮಾಡಿ ಬಸವಣ್ಣನನ್ನು ಮುಗಿಸುವ ಡೀಲ್ ನಡೆದಿದೆ ಎಂದು ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಬ್ಬು ಹೇಳಿದಂತೆ ಜೈಲಿನಿಂದಲೇ ಡಿಚ್ಚಿ ಮುಬಾರಕ್ ಬಸವಣ್ಣನ ಹತ್ಯೆಗೆ ಸ್ಕೆಚ್ ಹಾಕಿದ್ದು, ಸೀಗೆಬಾಗಿ ನಿವಾಸಿ ಟಿಪ್ಪು ಎಂಬಾತನಿಗೆ ಡೀಲ್ ಕೊಟ್ಟಿದ್ದಾನೆ. ಗಾಂಧಿ ಸರ್ಕಲ್ ನಲ್ಲಿ ಬಸವಣ್ಣನನ್ನು ಹೊಡೆದು ಹಾಕುವಂತೆ ಟಿಪ್ಪು ಆಂಡ್ ಟೀಂ ಗೆ ಹೇಳಲಾಗಿದೆ ಎಂದು ದೂರುದಾರರು ನೀಡಿದ ಹೇಳಿಕೆಯಂತೆ ಎಫ್ ಐ ಆರ್ ದಾಖಲಾಗಿದೆ.

ಅಲ್ಲದೇ 17ರಂದು ರಂಗಪ್ಪ ಸರ್ಕಲ್ ಬಳಿ ಸಿಕ್ಕ ಟಿಪ್ಪು ಬಾರ್ ವೊಂದರಲ್ಲಿ ಕುಳಿತು ಡಿಚ್ಚಿ ಮುಬಾರಕ್ ಡೀಲ್ ಕೊಟ್ಟಿದ್ದು, ಅದರಂತೆ ಚಾಕು ತಂದಿದ್ದೇನೆ ಎಂದು ಮುಬ್ಬುಗೆ ತೋರಿಸಿರುವ ಬಗ್ಗೆ ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆ ಶಾಸಕನ ಪುತ್ರನ ಹತ್ಯೆಗೆ ಹಾಕಿದ್ದ ಸಂಚು ಬಯಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular