ಶಿವಮೊಗ್ಗ: ಶಿವಮೊಗ್ಗದಿಂದ ಆಂಧ್ರಪ್ರದೇಶ ಮಚಲಿಪಟ್ಟಣ ಮತ್ತು ಗುಂತಕಲ್ ಗೆ ವಿಶೇಷ ರೈಲುಗಳು ಸಂಚರಿಸಲಿವೆ. ಶಿವಮೊಗ್ಗ- ಮಚಲಿಪಟ್ಟಣ, ಶಿವಮೊಗ್ಗ ಗುಂತಕಲ್ ನಡುವೆ ರೈಲ್ವೆ ಇಲಾಖೆಯಿಂದ ವಿಶೇಷ ರೈಲು ಸೇವೆ ಘೋಷಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಮಚಲಿಪಟ್ಟಣಂ- ಶಿವಮೊಗ್ಗ ರೈಲು ಆಗಸ್ಟ್ 30ರಂದು, ಶಿವಮೊಗ್ಗ ಗುಂತಕಲ್ ರೈಲು ಆಗಸ್ಟ್ 31ರಂದು ಸಂಚರಿಸಲಿದೆ. ಭದ್ರಾವತಿ, ತರೀಕೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ ಸೇರಿ ಪ್ರಮುಖ ನಿಲ್ದಾಣಗಳಲ್ಲಿ ನಿಲುಡೆ ಇರುತ್ತದೆ. ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು. ಉತ್ತಮ ಸ್ಪಂದನೆ ದೊರೆತರೆ ಮುಂದಿನ ದಿನಗಳಲ್ಲಿ ಈ ಮಾರ್ಗಗಳಲ್ಲಿ ನಿಯಮಿತ ರೈಲು ಸೇವೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶದ ಮಚಲಿಪಟ್ಟಣ ಮತ್ತು ಗುಂತಕಲ್ ಗೆ ಎರಡು ವಿಶೇಷ ರೈಲು ಸೇವೆಗಳನ್ನು ರೈಲು ಘೋಷಿಸಲಾಗಿದೆ. 20 ಬೋಗಿಗಳನ್ನು ಈ ವಿಶೇಷ ರೈಲುಗಳು ಹೊಂದಿವೆ. ಮಚಲಿಪಟ್ಟಣಂ- ಶಿವಮೊಗ್ಗ ಆಗಸ್ಟ್ 30 ರಂದು ಮಧ್ಯಾಹ್ನ 3:55 ಕ್ಕೆ ಮಚಲಿಪಟ್ಟಣಂನಿಂದ ಹೊರಟು ಆಗಸ್ಟ್ 31 ರಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗ -ಮಚಲಿಪಟ್ಟಣಂ ಸೆಪ್ಟಂಬರ್ 2ರಂದು ಸಂಜೆ 5:40ಕ್ಕೆ ಶಿವಮೊಗ್ಗದಿಂದ ಹೊರಟು ಸೆಪ್ಟಂಬರ್ 3ರಂದು ಮಧ್ಯಾಹ್ನ 5:55 ಕ್ಕೆ ಮಚಲಿಪಟ್ಟಣಂ ತಲುಪಲಿದೆ.
ಶಿವಮೊಗ್ಗ ಗುಂತಕಲ್ ಆಗಸ್ಟ್ 31 ರಂದು ಸಂಜೆ 5:40ಕ್ಕೆ ಶಿವಮೊಗ್ಗದಿಂದ ಹೊರಟು ಸೆಪ್ಟೆಂಬರ್ 1ರಂದು ಬೆಳಿಗ್ಗೆ 7 ಗಂಟೆಗೆ ಗುಂತಕಲ್ ತಲುಪಲಿದೆ. ಗುಂತಕಲ್ -ಶಿವಮೊಗ್ಗ ಸೆಪ್ಟೆಂಬರ್ 2ರಂದು ರಾತ್ರಿ 1.45ಕ್ಕೆ ಗುಂತಕಲ್ ನಿಂದ ಹೊರಟು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ತಲುಪಲಿದೆ. ಹಬ್ಬದ ಋತುವಿನಲ್ಲಿ ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರಿಗೆ ಈ ಸೇವೆಗಳು ಅನುಕೂಲಕರವಾಗಲಿವೆ. ಟಿಕೆಟ್ ಮುಂಗಡ ಕಾಯ್ದಿರಿಸುವುದಕ್ಕೆ ಲಭ್ಯವಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಲ್ಲಿ ಈ ಮಾರ್ಗಗಳಲ್ಲಿ ಶಾಶ್ವತ ರೈಲು ಸೇವೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ಹೇಳಿದ್ದಾರೆ.
ಈ ಸೇವೆ ಒದಗಿಸಲು ಸ್ಪಂದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವರಾದ ವಿ. ಸೋಮಣ್ಣ ಮತ್ತು ರವನೀತ್ ಸಿಂಗ್ ಬಿಟ್ಟು ಅವರಿಗೆ ಸಂಸದ ರಾಘವೇಂದ್ರ ಧನ್ಯವಾದ ಹೇಳಿದ್ದಾರೆ.

