ಶಿವಮೊಗ್ಗ: ಭಗ್ನಪ್ರೇಮಿಯೊಬ್ಬ ಎರಡು ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವೆಂಕಟೇಶನಗರದಲ್ಲಿ ನಡೆದಿದೆ.
ವೆಂಕಟೇಶನಗರದ ೫ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಮಣಿ ಎಂಬ ಯುವಕ ಈ ಕೃತ್ಯವೆಸಗಿದ್ದಾನೆ. ಮಣಿ ವೆಂಕಟೇಶನಗರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ದುಶ್ಚಟಗಳಿಗೆ ದಾಸನಾಗಿದ್ದ ಮಣಿಯನ್ನು ಯುವತಿ ನಿರ್ಲಕ್ಷ ಮಾಡಿದ್ದಳು. ಅಲ್ಲದೇ ಯುವತಿಗೆ ಇತ್ತೀಚೆಗೆ ಅಂಥೋಣಿದಾಸ್ ಎಂಬಾತನ ಜೊತೆ ನಿಶ್ಚಿತಾರ್ಥವಾಗಿತ್ತು.
ವಿಷಯ ತಿಳಿದ ಮಣಿ, ಕೋಪಗೊಂಡು ಅಂಥೋಣಿದಾಸ್ ಹಾಗೂ ಯುವತಿಯ ಸಹೋದರ ಇಬ್ಬರ ಬೈಕ್ ಗಳನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ತುಹಾಕಿದ್ದಾನೆ. ಮಣಿ ಬೈಕ್ ಗಳಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಕರಣ ಸಂಬಂಧ ಆರೋಪಿ ಮಣಿಯನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

