HomeKarnatakaSHOCKING NEWS: ಯುವತಿಯನ್ನು ಕೊಲೆಗೈದು ಹೊಂಡದಲ್ಲಿ ಶವ ಹಾಕಿ ಪರಾರಿಯಾಗಿದ್ದ ಕಿರಾತಕ

SHOCKING NEWS: ಯುವತಿಯನ್ನು ಕೊಲೆಗೈದು ಹೊಂಡದಲ್ಲಿ ಶವ ಹಾಕಿ ಪರಾರಿಯಾಗಿದ್ದ ಕಿರಾತಕ

ಶಿವಮೊಗ್ಗ: ಜೂನ್ 30ರಿಂದ ನಾಪತ್ತೆಯಾಗಿದ್ದ ಶಿವಮೊಗ್ಗ ಮೂಲದ ಯುವತಿ ಕೊಲೆಯಾಗಿದ್ದು, ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಪೂಜಾ (24) ಕೊಲೆಯಾಗಿರುವ ಯುವತಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಯುವತಿಯ ಶವ ಪತ್ತೆಯಾಗಿದೆ. ಆಗುಂಬೆಯ ಕುಶಾಲ್ ಎಂಬುವವರ ಪುತ್ರಿ ಪೂಜಾ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ನಾಲೂರಿನ ಮಣಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಮಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಪೂಜಾಳನ್ನು ಕತ್ತು ಹಿಸುಕಿ ಹೊಂದು ಹೊಂಡದಲ್ಲಿ ಶವ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಯುವತಿಯ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular