HomeKarnatakaBREAKING NEWS: ಕಸ ಹಾಕುವ ವಿಚಾರಕ್ಕೆ ಗಲಾಟೆ; ಅಣ್ಣನ ಮಗನಿಗೆ ಮನಬಂದಂತೆ ಚಾಕು ಇರಿದ ವ್ಯಕ್ತಿ

BREAKING NEWS: ಕಸ ಹಾಕುವ ವಿಚಾರಕ್ಕೆ ಗಲಾಟೆ; ಅಣ್ಣನ ಮಗನಿಗೆ ಮನಬಂದಂತೆ ಚಾಕು ಇರಿದ ವ್ಯಕ್ತಿ

ಶಿವಮೊಗ್ಗ: ಕಸದ ವಿಚಾರವಾಗಿ ನಡೆದ ಗಲಾಟೆ ಅಣ್ಣನ ಮಗನಿಗೇ ಚಾಕು ಇರಿಯುವ ಹಂತಕ್ಕೆ ತಲುಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮಂಡೆನಕೊಪ್ಪದಲ್ಲಿ ನಡೆದಿದೆ.

ಅಣ್ಣನ ಮಗ ಆಕಾಶ್ ಗೆ ಉಮೇಶ್ ಎಂಬಾತ ಮನಬಂದಂತೆ ಚಾಕು ಇರಿದಿದ್ದು, ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಸ ಹಾಕುವ ವಿಚಾರಕ್ಕೆ ಉಮೇಶ್ ಹಾಗೂ ಉಮೇಶನ ಅಣ್ಣನ ಮಗನ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಇಂದು ಕೂಡ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಉಮೇಶ್ ಅಣ್ಣನ ಮಗ ಆಕಾಶ್ ಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಂಗಾನಗರ ಠಾಣೆ ಪೊಲೀಸರು ಉಮೇಶ್ ನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular