HomeKarnatakaBREAKING NEWS: ಮದ್ಯದ ಅಮಲಿನಲ್ಲಿ ವೈದ್ಯ ಚಲಾಯಿಸುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ: ತಾಯಿ-ಮಗನ ಸ್ಥಿತಿ...

BREAKING NEWS: ಮದ್ಯದ ಅಮಲಿನಲ್ಲಿ ವೈದ್ಯ ಚಲಾಯಿಸುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ: ತಾಯಿ-ಮಗನ ಸ್ಥಿತಿ ಗಂಭೀರ

ಶಿವಮೊಗ್ಗ: ಮದ್ಯದ ಅಮಲಿನಲ್ಲಿ ವೈದ್ಯ ಚಲಾಯಿಸುತ್ತಿದ್ದ ಕಾರು ಬೈಕ್ ಗೆ ಡಿಕ್ಕಿ ಹೊಡೆದು ತಾಯಿ ಹಾಗೂ ಮಗನ ಸ್ಥಿತಿ ಗಂಭೀರವಾಗಿರುವ ಘಟನೆ ಶಿವಮೊಗ್ಗದ ವಿನೋಬಾನಗರದ ಸವಿ ಬೇಕರಿ ಬಳಿ ನಡೆದಿದೆ.

ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ತಾಯಿ ಉಮಾ ಹಾಗೂ ಮಗ ಶ್ರೇಯಸ್ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ.

ಡಾ.ಅಲ್ವಿನ್ ಥಾಮಸ್ ಎಂಬ ವೈದ್ಯ ಶಿವಮೊಗ್ಗದ ಕಾಸ್ಮೋ ಕ್ಲಬ್ ನಿಂದ ಪಾರ್ಟಿ ಮುಗಿಸಿ ಹೊರಬಂದಿದ್ದರು. ಮದ್ಯದ ಅಮಲಿನಲ್ಲಿ ತನ್ನ ಸ್ಕೋಡಾ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ತಾಯಿ-ಮಗ ಘಟನಾ ಅಸ್ಥಳದಿಂದ 200 ಮಿಟರ್ ದೂರ ಬಿದ್ದಿದ್ದರು. ಅಪಘಾತದ ಬಳಿಕ ವೈದ್ಯ ಕಾರಿನಲ್ಲಿ ಪರಾರಿಯಾಗುತ್ತಿದ್ದ. ಈ ವೇಳೆ ಸ್ಥಳೀಯರು ವೈದ್ಯನ ಕಾರು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ವೈದ್ಯ ತನ್ನ ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗದ ಪಶ್ಚಿಮ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular