HomeLatest NewsBREAKING: ಶಿವಮೊಗ್ಗದಲ್ಲಿ LPG ಸಿಲಿಂಡರ್ ಸ್ಫೋಟ: ಪತ್ನಿಗೆ ಗಿಫ್ಟ್ ನೀಡಲು ತಂದಿದ್ದ ಚಿನ್ನಾಭರಣ, ಮನೆಯಲ್ಲಿದ್ದ ವಸ್ತುಗಳು...

BREAKING: ಶಿವಮೊಗ್ಗದಲ್ಲಿ LPG ಸಿಲಿಂಡರ್ ಸ್ಫೋಟ: ಪತ್ನಿಗೆ ಗಿಫ್ಟ್ ನೀಡಲು ತಂದಿದ್ದ ಚಿನ್ನಾಭರಣ, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮ

ಶಿವಮೊಗ್ಗ: ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು ಇಡೀ ಮನೆ ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗದ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಮಹೇಶ್ ಹಾಗೂ ಮೋಹಿನಿ ದಂಪತಿಯ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ. ಘಟನೆ ವೇಳೆ ಮಹೇಶ್ ಹಾಗೂ ಮೋಹಿನಿ ಮನೆಯಲ್ಲಿ ಇರಲಿಲ್ಲವಾದ್ದರಿಂದ ಭಾರಿ ಅನಾಹುತ ತಪ್ಪಿದೆ. ಆದರೆ ಮನೆಯಲ್ಲಿದ್ದ 80 ಗ್ರಾಂ ಚಿನ್ನಾಭರಣ, ಧವಸ-ಧಾನ್ಯ, ಬಟ್ಟೆ, ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್, ಪೀಠೋಪಕರಣಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಡಿಸೆಂಬರ್ 28ರಂದು ಮಹೇಶ್ ಪತ್ನ್ ಮೋಹಿನಿಯವರ ಹುಟ್ಟುಹಬ್ಬವಿತ್ತು. ಹಲವು ವರ್ಷಗಳಿಂದ ದುಡಿದ ಹಣವನ್ನು ಕೂಡಿಟ್ಟು ಪತ್ನಿಗೆ ಆಭರಣ ಮಾಡಿಸಿ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 80 ಗ್ರಾಂ ಚಿನ್ನಾಭರಣ ತಂದಿಟ್ಟಿದ್ದರು. ಆದರೆ ಹುಟ್ಟುಹಬ್ಬಕ್ಕೂ ಮೊದಲೇ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ, ಚಿನ್ನಾಭರಣಗಳು ಸುಟ್ಟು ಕರಕಲಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಸುಟ್ಟು ಭಸ್ಮವಾಗಿವೆ ಎಂದು ದಂಪತಿ ಕಣ್ಣೀರಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular