HomeKarnatakaಶಿವಮೊಗ್ಗ–ಬೆಂಗಳೂರು ನಡುವೆ ಇಂಡಿಗೋ ವಿಮಾನ ಹಾರಾಟ ಸ್ಥಗಿತ

ಶಿವಮೊಗ್ಗ–ಬೆಂಗಳೂರು ನಡುವೆ ಇಂಡಿಗೋ ವಿಮಾನ ಹಾರಾಟ ಸ್ಥಗಿತ

ಶಿವಮೊಗ್ಗ: ಮಹತ್ವದ ಬೆಳವಣಿಗೆಯೊಂದರಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ಶಿವಮೊಗ್ಗ–ಬೆಂಗಳೂರು ನಡುವಿನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ.

ಶಿವಮೊಗ್ಗ-ಬೆಂಗಳೂರು ನಡುವೆ ಏ.30ರ ಮಧ್ಯಾಹ್ನ 2:30ಕ್ಕೆ ಇಂಡಿಗೋ ವಿಮಾನ ಕೊನೆ ಹಾರಾಟ ನಡೆಸಿತು. ಈ ಮೂಲಕ ಕೇವಲ 33 ತಿಂಗಳಲ್ಲೇ ಇಂಡಿಗೋ ಸಂಸ್ಥೆ ಪ್ರಯಾಣ ಸ್ಥಗಿತಗೊಳಿಸಿದಂತಾಗಿದೆ.

2023ರ ಆಗಸ್ಟ್ 11 ರಂದು ಇಂಡಿಗೋ ವಿಮಾನ ಸಂಸ್ಥೆ ಶಿವಮೊಗ್ಗ-ಬೆಂಗಳೂರು ನಡುವೆ ತನ್ನ ಮೊದಲ ಸೇವೆ ಆರಂಭಿಸಿತ್ತು. ಇದರಿಂದ ಮಲೆನಾಡು ಮತ್ತು ಮಧ್ಯ ಕರ್ನಾಟಕಕ್ಕೆ ಅನುಕೂಲವಾಗಿತ್ತು. 33 ತಿಂಗಳ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಸೇವೆ ಒದಗಿಸಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಇದ್ದರೂ ವಿಮಾನ ಯಾನ ಸಂಸ್ಥೆ ತನ್ನ ಹಾರಾಟ ಸ್ಥಗಿತಗೊಳಿಸಿದೆ.ಈ ಬಗ್ಗೆ ಇಂಡಿಗೋ ತನ್ನ ವೆಬ್‍ಸೈಟ್‍ನಲ್ಲಿ ಇಂದಿನಿಂದ ಬೆಂಗಳೂರು–ಶಿವಮೊಗ್ಗ ನಡುವಿನ ಟಿಕೆಟ್ ಬುಕ್ಕಿಂಗ್ ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಡಾನ್ ಯೋಜನೆಯಡಿ ರಾಜಧಾನಿಗೆ ಸಂಚಾರ ಸಾಧ್ಯವಿಲ್ಲ. ಅಲ್ಲದೇ ಡಿಜಿಸಿಎ ವಿಧಿಸಿದ ಹೊಸ ನಿಯಮಗಳಿಂದ ಪೈಲಟ್ ಹಾಗೂ ಸಿಬ್ಬಂದಿ ಕೊರತೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ-ಬೆಂಗಳೂರು ವಿಮಾನ ಯಾನ ಸೇವೆ ಸ್ಥಗಿತಗೊಳಿಸಿದೆ.

ಈ ಹಿಂದೆ ಶಿವಮೊಗ್ಗ–ಬೆಂಗಳೂರು ನಡುವೆ ಸಂಚಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ರಾಜ್ಯ ಸರ್ಕಾರ ಪ್ರತಿ ಟಿಕೆಟ್‌ಗೆ 500 ರೂ. ಸಹಾಯಧನ ನೀಡುತ್ತಿತ್ತು. 2025ರ ಆಗಸ್ಟ್‌ಗೆ ಒಪ್ಪಂದ ಅಂತ್ಯವಾಗಿತ್ತು. ಆದರೂ ಇಂಡಿಗೋ ಈವರೆಗೂ ವಿಮಾನ ಸೇವೆ ನೀಡಿತ್ತು. ಇದೀಗ ಒಪ್ಪಂದ ನವೀಕರಣಕ್ಕೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಶಿವಮೊಗ್ಗ-ಬೆಂಗಳೂರು ಇಂಡೀಗೋ ವಿಮಾನ ಹಾರಾಟ ಇರುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular