HomeLatest Newsಕಂಠಪೂರ್ತಿ ಕುಡಿದು ಆಂಬುಲೆನ್ಸ್ ಚಾಲನೆ: ಚಾಲಕನಿಗೆ ಬಿತ್ತು 13 ಸಾವಿರ ರೂಪಾಯಿ ದಂಡ

ಕಂಠಪೂರ್ತಿ ಕುಡಿದು ಆಂಬುಲೆನ್ಸ್ ಚಾಲನೆ: ಚಾಲಕನಿಗೆ ಬಿತ್ತು 13 ಸಾವಿರ ರೂಪಾಯಿ ದಂಡ

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಆಂಬುಲೆನ್ಸ್ ಚಾಲನೆ ಮಾಡಿದ್ದ ಚಾಲಕನಿಗೆ 13 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಐಬಿ ಸರ್ಕಲ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರಿಗೆ ಆಂಬುಲೆನ್ಸ್ ಚಾಲಕನೊಬ್ಬ ಅಜಾಗುರೂಕತೆಯಿಂದ ಆಂಬುಲೆನ್ಸ್ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡುಬಂದಿದೆ. ಆಂಬುಲೆನ್ಸ್ ತಡೆದು ತಪಾಸಣೆ ನಡೆಸಿದಾಗ ಚಾಲಕ ಮದ್ಯಪಾನ ಮಾಡಿರುವುದು ಸಾವೀತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಹನದ ದಾಖಲಾತಿ ಪರಿಶೀಲಿಸಿದಾಗ ಇನ್ಶುರೆನ್ಸ್ ಇಲ್ಲದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಶಿವಮೊಗ್ಗ ನ್ಯಾಯಾಲಯ ಚಾಲಕನಿಗೆ 13 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular