HomeKarnatakaಮಲೆನಾಡು ಭಾಗದ ಬಡ ರೋಗಿಗಳಿಗೆ ಗುಡ್ ನ್ಯೂಸ್: ಮೊದಲ ಹಂತದಲ್ಲೇ ರೋಗ ಪತ್ತೆ, ಚಿಕಿತ್ಸೆ ಸೌಲಭ್ಯ

ಮಲೆನಾಡು ಭಾಗದ ಬಡ ರೋಗಿಗಳಿಗೆ ಗುಡ್ ನ್ಯೂಸ್: ಮೊದಲ ಹಂತದಲ್ಲೇ ರೋಗ ಪತ್ತೆ, ಚಿಕಿತ್ಸೆ ಸೌಲಭ್ಯ

ಶಿವಮೊಗ್ಗ: ಶಿವಮೊಗ್ಗ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಆ.28 ರಂದು ಅಫಿನಿಟಿ – 70ಜಿ ಮತ್ತು ಅಲ್ಟ್ರಾಸೌಂಡ್ ಯಂತ್ರಗಳನ್ನು ಉದ್ಘಾಟಿಸಲಾಗಿದ್ದು, ಅಫಿನಿಟಿ-70ಜಿ ಯಂತ್ರದಿಂದ ಯಕೃತ್(ಲಿವರ್)ನಲ್ಲಿ ಕಂಡು ಬರುವ ಅತೀ ಸೂಕ್ಷ್ಮ ರೋಗಳಗಳನ್ನ ಮತ್ತು ಮೂತ್ರಪಿಂಡದ ಖಾಯಿಲೆಯನ್ನು ಮೊದಲ ಹಂತದಲ್ಲಿಯೇ ರೋಗ ಪತ್ತೆ ಹಚ್ಚಿ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ.

2007 ರಿಂದ ರೇಡಿಯೋ-ಡಯೋಗ್ನೊಸಿಸ್ ವಿಭಾಗದಲ್ಲಿ ಎಕ್ಸ್ ರೇ, ಸಿಟಿ ಸ್ಕ್ಯಾನ್, ಎಂಆರ್‌ಐ, ಅಲ್ಟ್ರಾಸೌಂಡ್ ಸೇವೆಗಳನ್ನು ರೋಗಿಗಳಿಗೆ ಒದಗಿಸಲಾಗುತ್ತಿದೆ. ರೇಡಿಯೋ ಡಯೋಗ್ನೊಸಿಸ್ ವಿಭಾಗದಲ್ಲಿ ಉನ್ನತ ಎಕ್ಸ್-ರೇ ಮಷೀನ್‌ಗಳು, ಅಲ್ಟ್ರಾಸೌಂಡ್ ಮಷೀನ್ಸ್, ಸಿಟಿ ಮಷೀನ್‌ಗಳು 4, ಎಂಆರ್‌ಐ ಯಂತ್ರಗಳು ಲಭ್ಯವಿರುತ್ತವೆ.

ಈ ಸೌಲಭ್ಯದಿಂದ ರೋಗಿಗಳಿಗೆ ಸಕಾಲದಲ್ಲಿ ವರದಿಯನ್ನು ನೀಡಲು ಸಾಧ್ಯವಾಗುತ್ತಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವೀಧರರಿಗೆ ಹಾಗೂ ಕಲಿಕಾ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ತರಬೇತಿಯನ್ನು ನೀಡುವ ಗುರಿ ಹೊಂದಲಾಗಿದೆ. ಒಂದು ದಿನಕ್ಕೆ 100 ರಿಂದ 120 ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮತ್ತು 125 ರಿಂದ 130 ಸಿಟಿ ಹಾಗೂ 20 ರಿಂದ 25 ಎಂಆರ್‌ಐ ಸೇವೆಯನ್ನು ನೀಡಲಾಗುತ್ತಿದೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು/ಡೀನ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular