HomeSportsಯುಜ್ವೇಂದ್ರ ಚಹಲ್ ಜೊತೆ ಅಫೇರ್? ಗಾಸಿಪ್‌ಗಳಿಗೆ ಗುದ್ದು ನೀಡಿದ ಆಂಕರ್ ಶೆಫಾಲಿ ಬಗ್ಗಾ!

ಯುಜ್ವೇಂದ್ರ ಚಹಲ್ ಜೊತೆ ಅಫೇರ್? ಗಾಸಿಪ್‌ಗಳಿಗೆ ಗುದ್ದು ನೀಡಿದ ಆಂಕರ್ ಶೆಫಾಲಿ ಬಗ್ಗಾ!

ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಖ್ಯಾತ ಸ್ಪೋರ್ಟ್ಸ್ ಆಂಕರ್ ಶೆಫಾಲಿ ಬಗ್ಗಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ಧಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿತ್ತು. ಈ ವದಂತಿಗಳಿಂದ ಬೇಸತ್ತಿರುವ ಶೆಫಾಲಿ, ಈಗ ಖಡಕ್ ಆಗಿ ಪ್ರತಿಕ್ರಿಯೆ ನೀಡುವ ಮೂಲಕ ಗಾಸಿಪ್‌ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಊಟಕ್ಕೆ ಹೋದರೆ ಡೇಟಿಂಗ್ ಎಂದರ್ಥವೇ? ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಶೆಫಾಲಿ, “ಜನರ ಆಲೋಚನೆ ಎಷ್ಟು ಸಣ್ಣದಾಗಿದೆ ಎಂದರೆ, ಯಾರಾದರೂ ಒಟ್ಟಿಗೆ ಡಿನ್ನರ್‌ಗೆ ಹೋದರೆ ಸಾಕು ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ನಿರ್ಧರಿಸಿಬಿಡುತ್ತಾರೆ. ಕೇವಲ ಒಂದು ವಿಡಿಯೋ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಜನರು ಏನೇನೋ ಕಲ್ಪಿಸಿಕೊಳ್ಳುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರಿಸಿ ನಾನು ಸುಸ್ತಾಗಿ ಹೋಗಿದ್ದೇನೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಗೆರೆ ಸ್ಪೋರ್ಟ್ಸ್ ಆಂಕರ್ ಆಗಿರುವುದರಿಂದ ಕ್ರಿಕೆಟಿಗರನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಸಂವಹನ ನಡೆಸುವುದು ನನ್ನ ವೃತ್ತಿಯ ಭಾಗ. ಆದರೆ ಜನರು ಅದನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದಿರುವ ಶೆಫಾಲಿ, “ನನ್ನ ಬಗ್ಗೆ ಯಾರು ಏನು ಬೇಕಾದರೂ ಅಂದುಕೊಳ್ಳಲಿ, ನನಗೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ಸತ್ಯ ಏನು ಎಂಬುದು ನನಗೂ ಮತ್ತು ನನ್ನ ಹಿತೈಷಿಗಳಿಗೂ ತಿಳಿದಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ರಿಕೆಟಿಗರನ್ನು ಡೇಟ್ ಮಾಡಲ್ಲ! ಇದೇ ವೇಳೆ “ನೀವು ಎಂದಾದರೂ ಕ್ರಿಕೆಟಿಗರನ್ನು ಮದುವೆಯಾಗುತ್ತೀರಾ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ನನ್ನ ವೃತ್ತಿಜೀವನ. ನನ್ನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಮಿಕ್ಸ್ ಮಾಡಲು ನನಗೆ ಇಷ್ಟವಿಲ್ಲ. ಆದರೆ ವಿರಾಟ್ ಕೊಹ್ಲಿ ಮತ್ತು ಎಂ.ಎಸ್ ಧೋನಿ ಅವರಂತಹ ಆಟಗಾರರಲ್ಲಿರುವ ನಾಯಕತ್ವ ಮತ್ತು ಶಿಸ್ತಿನ ಗುಣಗಳನ್ನು ನಾನು ಗೌರವಿಸುತ್ತೇನೆ” ಎಂದು ಹೇಳಿದ್ದಾರೆ.

ಈ ಸ್ಪಷ್ಟನೆಯ ಮೂಲಕ ಚಹಲ್ ಮತ್ತು ಶೆಫಾಲಿ ನಡುವೆ ಏನೂ ನಡೆಯುತ್ತಿಲ್ಲ ಎಂಬುದು ಈಗ ಸಾಬೀತಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular