ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ಉಚಿತ ಸ್ವಯಂ ಉದ್ಯೋಗ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು ಹಾಗೂ ತರಬೇತಿ ಪಡೆದವರಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು.
ತರಬೇತಿಯ ವಿವರಗಳು:
- ಕುರಿ ಸಾಕಾಣಿಕೆ: 12 ದಿನಗಳು
- ಅಣಬೆ ಬೇಸಾಯ: 10 ದಿನಗಳು
- ಜೂಟ್ ಬ್ಯಾಗ್ ತಯಾರಿಕೆ: 13 ದಿನಗಳು
- ಫಾಸ್ಟ್ ಫುಡ್ ಸ್ಟಾಲ್: 12 ದಿನಗಳು
ಪ್ರಮುಖ ದಿನಾಂಕಗಳು:
- ಸಂದರ್ಶನ ದಿನಾಂಕ: 09.06.2026
- ತರಬೇತಿ ಪ್ರಾರಂಭವಾಗುವ ದಿನಾಂಕ: 10.06.2026
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
- ಅಭ್ಯರ್ಥಿಯು 18 ವರ್ಷದಿಂದ 45 ವರ್ಷದೊಳಗಿನವರಾಗಿರಬೇಕು.
- ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.
- ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು.
- ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
- ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
- ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ
- ಪಾನ್ ಕಾರ್ಡ್ ಜೆರಾಕ್ಸ್ ಪ್ರತಿ
- ಎಸ್ಬಿಐ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ
- ಪಾಸ್ಪೋರ್ಟ್ ಸೈಜ್ ಫೋಟೋಗಳು – 3
- ವಿದ್ಯಾಭ್ಯಾಸದ ದಾಖಲೆ ಜೆರಾಕ್ಸ್ ಪ್ರತಿ
ಅರ್ಜಿ ಸಲ್ಲಿಸುವ ವಿಳಾಸ: ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ್ ಸರ್ಕಲ್ ಹತ್ತಿರ, ಕೊಪ್ಪಳ. ದೂರವಾಣಿ ಸಂಖ್ಯೆ: 08539-231038, 9483618178, 7259073827, 9538096796, 9481085217.

