HomeLatest NewsBREAKING: ವಿಷಪೂರಿತ ನೀರು ಕುಡಿದು 60 ಕುರಿಗಳು ಸಾವು

BREAKING: ವಿಷಪೂರಿತ ನೀರು ಕುಡಿದು 60 ಕುರಿಗಳು ಸಾವು

ರಾಯಚೂರು: ವಿಷಪೂರಿತ ನೀರು ಕುಡಿದು 60 ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರಿನ ಅರಕೆರಾ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿ ನಡೆದಿದೆ.

ಹೆಗ್ಗಡದಿನ್ನಿ ಗ್ರಾಮದ ಭೀಮಪ್ಪ ಎಂಬುವವರಿಗೆ ಸೇರಿದ 60 ಕುರಿಗಳು ವಿಷಪೂರಿತ ನೀರಿನಿಂದ ಸಾವನ್ನಪ್ಪಿವೆ. ಕೃಷಿಹೊಂಡದಲ್ಲಿನ ನೀರನ್ನು ಕುಡಿದಿದ್ದ ಕುರಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿವೆ. ನೀರಿನಲ್ಲಿ ವಿಷಪೂರಿತ ಅಂಶದಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಜೀವನಾಧಾರವಾಗಿದ್ದ 60 ಕುರಿಗಳನ್ನು ಕಳೆದುಕೊಂಡಿರುವ ಭೀಮಪ್ಪ ಕಣ್ಣಿರಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular