HomeBeautyಮೊಡವೆ ಮುಖದ ಶೇವಿಂಗ್ ಮಾಡುವುದು ಬಲು ಕಷ್ಟದ ಕೆಲಸ

ಮೊಡವೆ ಮುಖದ ಶೇವಿಂಗ್ ಮಾಡುವುದು ಬಲು ಕಷ್ಟದ ಕೆಲಸ

ಪುರುಷರ ಮುಖದ ಮೇಲೂ ಮೊಡವೆಗಳು ಮೂಡುತ್ತವೆ. ಆ ಸಂದರ್ಭದಲ್ಲಿ ಮುಖದ ಶೇವಿಂಗ್ ಮಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸುತ್ತದೆ.

ಮೊಡವೆ ಮುಖದವರು ಶೇವಿಂಗ್ ಮಾಡುವ ಮುನ್ನ ಬಿಸಿನೀರಿನ ಸ್ನಾನ ಮಾಡಿ ಅಥವಾ ಮುಖಕ್ಕೆ ಹಬೆಯಾಡಿಸಿ. ಇದರಿಂದ ತ್ವಚೆ ಮತ್ತು ಮುಖದ ಮೇಲಿನ ಕೂದಲನ್ನು ಸುಲಭವಾಗಿ ನಿವಾರಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತಮ ದರ್ಜೆಯ ರೇಜರ್ ಕೊಳ್ಳಿ. ಒಮ್ಮೆ ಸವರಿದಾಗಲೇ ಎಲ್ಲಾ ಕೂದಲು ಹೋಗುವಂತಿರಲಿ. ಆಗಾಗ ರೇಜರ್ ನ ಬ್ಲೇಡ್ ಬದಲಿಸುತ್ತಿರಿ.

ಮೊಡವೆ ಸಮಸ್ಯೆ ಇದ್ದವರು ಟ್ರಿಮ್ಮರ್ ಅಥವಾ ಎಲೆಕ್ಟ್ರಿಕ್ ಶೇವರ್ ಬಳಸದಿರುವುದು ಉತ್ತಮ. ಬ್ಲೇಡ್ ಶುಚಿಗೊಳಿಸಿಯೇ ರೇಜರ್ ಬಳಸಿ. ಉತ್ತಮ ದರ್ಜೆಯ ಮಾಯಿಸ್ಚರೈಸರ್ ಮತ್ತು ಶೇವಿಂಗ್ ಕ್ರೀಮ್ ಬಳಸಿ. ಇದು ತ್ವಚೆಯನ್ನು ಮೃದುಗೊಳಿಸಿ ನಿಮ್ಮ ಕೆಲಸವನ್ನು ಸರಾಗಗೊಳಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular