HomeKarnatakaದುಬೈನ ಶಾರ್ಜಾದಲ್ಲಿ ಕನ್ನಡಿಗನ ಬರ್ಬರ ಹತ್ಯೆ: ಎದೆಗೆ ಚೂರಿ ಇರಿದು 9 ತುಂಡುಗಳನ್ನಾಗಿ ಕತ್ತರಿಸಿ ಕಾರಿನಲ್ಲಿ...

ದುಬೈನ ಶಾರ್ಜಾದಲ್ಲಿ ಕನ್ನಡಿಗನ ಬರ್ಬರ ಹತ್ಯೆ: ಎದೆಗೆ ಚೂರಿ ಇರಿದು 9 ತುಂಡುಗಳನ್ನಾಗಿ ಕತ್ತರಿಸಿ ಕಾರಿನಲ್ಲಿ ತುಂಬಿದ ದುಷ್ಕರ್ಮಿಗಳು

ಶಾರ್ಜಾ: ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ಕನ್ನಡಿಗನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ದೇಹವನ್ನು 9 ತುಂಡುಗಳನ್ನಾಗಿ ಕತ್ತರಿಸಿ ಕಾರಿನಲ್ಲಿ ತುಂಬಿರುವ ಘಟನೆ ನಡೆದಿದೆ.

ಜುಲೈ ತಿಂಗಳಿನಲ್ಲಿಯೇ ನಡೆದಿರುವ ಈ ಕೊಲೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕಾಶ್ ಕುಂದರ್ ಬರ್ಬರವಾಗಿ ಹತ್ಯೆಯಾಗಿರುವ ದುರ್ದೈವಿ. ದುಷ್ಕರ್ಮಿಗಳು ಪ್ರಕಾಶ್ ಕುಂದರ್ ಅವರ ಎದೆಗೆ ಚೂರಿ ಇರಿದು ಕೊಲೆಮಾಡಿ, ಶವವನ್ನು 9 ತುಂಡುಗಳನ್ನಾಗಿ ಕತ್ತರಿಸಿ ಅವರದ್ದೇ ಕಾರಿನ ಡಿಕ್ಕಿಯಲ್ಲಿ ತುಂಬಿದ್ದರು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕಾಶ್ ಕುಂದರ್ ಶಾರ್ಜಾ ಏರ್ ಪೋರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಹಾಗೂ ಪುತ್ರನೊಂದಿಗೆ ಶಾರ್ಜಾದಲ್ಲಿಯೇ ಹಲವು ವರ್ಷಗಳಿಂದ ನೆಲೆಸಿದ್ದರು. ಕೊಲೆಯ ಬಳಿಕ ಮೃತನ ಪತ್ನಿ ಟೀನಾ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪತ್ನಿಯೇ ಕೊಲೆ ಮಾಡಿಸಿದ್ದಾರೆಯೇ? ಅಥವಾ ಬೇರೆಯವರ ಸಹಾಯದಿಂದ ಕೃತ್ಯ ಎಸಗಲಾಗಿದೆಯೇ? ಪತ್ನಿ ಹಾಗೂ ಮಗ ನಾಪತ್ತೆಯಾಗಲು ಕಾರಣವಾದರೂ ಏನು? ಇಡೀ ಘಟನೆ ಹಿಂದಿನ ಕೈವಾಡವಾದರೂ ಏನು? ಎಂಬ ಬಗ್ಗೆ ಶಾಅರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕಾಶ್ ಕುಂದರ್ ಸಾವಿನ ಬಳಿಕ ಪತ್ನಿ ಮತ್ತು ಪುತ್ರ ಭಾರತಕ್ಕೆ ಬಂದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಬಂಧ ಶಾರ್ಜಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರಕಾಶ್ ಕುಂದರ್ ನ ಕುಟುಂಬದವರು ಉಡುಪಿಯಲ್ಲಿದ್ದಾರೆ. ಜು.20 ರಂದು ಸಹೋದರ ಪ್ರಕಾಶ್ ಕುಂದರ್ ನನ್ನು ಸಂಪರ್ಕಿಸಲು ಪ್ರಶಾಂತ್ ಕುಂದರ್ ಯತ್ನಿಸಿದ್ದರು. ಮೆಸೇಜ್ ಹಾಕಿದಾಗ ಯಾವಾಗಲೂ ಪ್ರಕಾಶ್ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ಈ ಬಾರಿ ಟೆಕ್ಸ್ಟ್ ಮೆಸೇಜ್ ಮೂಲಕ ಉತ್ತರ ನೀಡಿದ್ದರು. ಹಲವು ಬಾರಿ ಕರೆ ಮಾಡುವಂತೆ ಸಂದೇಶ ಕಳುಹಿಸಿದರೂ ಪ್ರಕಾಶ್ ಕಡೆಯಿಂದ ಕೇವಲ ಟೆಕ್ಸ್ಟ್ ಮೆಸೇಜ್ ಮಾತ್ರ ಬರುತ್ತಿತ್ತು. ಇದಕ್ಕೆ ಸಹೋದರ ಪ್ರಶಾಂತ್ ಈ ಬಾರಿ ನಿನಗೆ ಕರೆ ಮಾಡಿ ಮಾತನಾಡಲೂ ಸಮಯವಿಲ್ಲವೇ? ಎಂದು ಬೈದು ಮೆಸೇಜ್ ಕಳುಹಿಸಿದ್ದರಂತೆ ಈ ಮೆಸೇಜ್ ನೋಡಿದ ಬಳಿಕವೂ ಪ್ರಕಾಶ್ ಕುಂದರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಎರಡು ದಿನ ಕಾದರೂ ಯಾವುದೇ ಮೆಸೇಜ್, ಕರೆ ಬಾರದಿದ್ದಾಗ ಪ್ರಶಾಂತ್ ಅವರು ಕರೆ ಮಾಡಿದ್ದಾರೆ. ಮೆಸೇಜ್ ಕಳುಹಿಸಿದ್ದಾರೆ. ಕುಟುಂಬಸ್ಥರು ಕರೆ ಮಾಡುವಂತೆ ಒತ್ತಾಯಿಸಿದ ನಂತರ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು.

ಇದರಿಂದ ಅನುಮಾನಗೊಂಡ ಸಹೋದರರು ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪನಿಯ ಹೆಚ್ ಆರ್ ಅವರನ್ನು ಸಂಪರ್ಕಿಸಿದ್ದರು. ಆಗ ಅವರು ಭಾರತಕ್ಕೆ ಹೋಗಿರುವುದಾಗಿ ಕಂಪನಿಯವರು ತಿಳಿಸಿದ್ದರು. ಆದರೆ ಅವರು ಭಾರತಕ್ಕೆ ಮರಳಿಲ್ಲ ಎಂದು ಪ್ರಶಾಂತ್ ತಿಸಿದ್ದರು. ಪ್ರಕಾಶ್ ವಾಸವಿದ್ದ ಮನೆಯ ಬಳಿ ಇದ್ದ ಭಾರತದ ಪರಿಚಯಸ್ಥರಿಬ್ಬರಿಗೆ ಕರೆ ಮಾಡಿ ಪ್ರಕಾಶ್ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದರಂತೆ. ಆತ ಮನೆ ಬಳಿ ಹೋಗಿ ನೋಡಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಈ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆತಂಕಕ್ಕೊಳಗಾದ ಪ್ರಶಾಂತ್, ಪ್ರಕಾಶ್ ಅವರ ಕಂಪನಿಗೆ ಕರೆ ಮಾಡಿ ದೂರು ದಾಖಲಿಸಿದ್ದರಂತೆ. ಅಲ್ಲದೇ ಶಾರ್ಜಾ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕಾಶ್ ಕುಂದರ್ ಭಾರತಕ್ಕೆ ಬಾರದೇ ಇರುವುದರಿಂದ ಶಾರ್ಜಾದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಹುಡುಕಾಟ ನಡೆಸಿದಾಗ ಪ್ರಕಾಶ್ ಅವರ ಕಾರಿನ ಡಿಕ್ಕಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ದುಷ್ಕರ್ಮಿಗಳು ಮೃತದೇಹವನ್ನು ಒಂಭತ್ತು ತುಂಡುಗಳನ್ನಾಗಿ ಮಾಡಿ ಕತ್ತರಿಸಿ ಕಾರಿನಲ್ಲಿ ಇಟ್ಟಿದ್ದರು. ಪ್ರಕಾಶ್ ಕುಂದರ್ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕಾಶ್ ಸಾವಿನ ಬಳಿಕ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಮಗ ಎಲ್ಲಿಗೆ ಹೋಗಿದ್ದಾರೆ? ನಾಪತ್ತೆಯಾಗಲು ಕಾರಣವೇನು? ಎಂಬ ಬಗ್ಗೆಯೂ ತಿಳಿದುಬಂದಿಲ್ಲ. ಶಾರ್ಜಾ ಪೊಲೀಸರು ಕೊಲೆ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ. ಇತ್ತ ಉಡುಪಿಯಲ್ಲಿ ಅವರ ಸಹೋದರರು ಹಾಗೂ ಕುಟುಂಬದವರು ಪ್ರಕಾಶ್ ಮೃತದೇಹಕ್ಕಾಗಿ ಕಾಯುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular