HomeKarnatakaSHOCKING NEWS: ಶರಾವತಿ ಹಿನ್ನೀರಿನಲ್ಲಿ ದುರಂತ: ತೆಪ್ಪ ಮಗುಚಿ ಮೂವರು ಯುವಕರು ಜಲಸಮಾಧಿ

SHOCKING NEWS: ಶರಾವತಿ ಹಿನ್ನೀರಿನಲ್ಲಿ ದುರಂತ: ತೆಪ್ಪ ಮಗುಚಿ ಮೂವರು ಯುವಕರು ಜಲಸಮಾಧಿ

ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ದುರಂತ ಸಂಭವಿಸಿದ್ದು, ತೆಪ್ಪ ಮಗುಚಿಬಿದ್ದು, ಮೂವರು ಯುವಕರು ನೀರುಪಾಲಾಗಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ. ಹುಲಿದೇವರ ಬನದ ಸಂದೀಪ್ (35) ಸಿಗಂದೂರು ಚೇತನ್ (30) ಗಿಣಿವಾರದ ರಾಜು (28) ಮೃತ ಯುವಕರು.

ಶರಾವತಿ ಹಿನ್ನೀರಿನಲ್ಲಿ ನಾಪತ್ತೆಯಗಿದ್ದ ಮೂವರು ಯುವಕರಿಗಾಗಿ ಶೋಧಕಾರ್ಯ ನಡೆಸಲಾಗಿದ್ದು, ಇಂದು ಬೆಳಿಗ್ಗೆ ಮೂವರ ಮೃತದೇಹ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ 40 ಅಡಿ ಆಳದಲ್ಲಿ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂವರು ಸ್ನೇಹಿತರು ಹೊಳೆಬಾಗಿಲು ಕಡೆಯಿಂದ ತೆಪ್ಪದಲ್ಲಿ ಊಟಕ್ಕೆ ತೆರಳಿದ್ದರು. ಊಟದ ಬಳಿಕ ವಾಪಾಸ್ ಆಗುವಾಗ ತೆಪ್ಪ ಮಗುಚಿ ದುರಂತ ಸಂಭವಿಸಿದೆ.

 

For Latest News Updates, Join Our Whatsapp Community🚩
RELATED ARTICLES

Most Popular